ಅಂತರಾಷ್ಟ್ರೀಯ

ಕಾಬುಲ್ ನಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ: 26 ಮಂದಿ ಸಾವು, 18 ಜನರಿಗೆ ಗಾಯ

Pinterest LinkedIn Tumblr

ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಆತ್ಮಹತ್ಯಾ ದಾಳಿಕೋರ ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟು 18 ಜನ ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಆತ್ಮಹತ್ಯಾ ದಾಳಿಕೋರ ಬಾಂಬ್ ಸ್ಫೋಟಿಸಿದ್ದಾನೆ ಎಂದು ಆಫ್ಘಾನಿಸ್ತಾನದ ಟೊಲೊ ನ್ಯೂಸ್ ವರದಿ ಮಾಡಿದೆ.

ಕಾಬುಲ್ ವಿಶ್ವವಿದ್ಯಾಲಯದ ಸಮೀಪ ಈ ಘಟನೆ ಸಂಭವಿಸಿದೆ. ಪ್ರಬಲ ಸ್ಫೋಟದಿಂದ ಭಾರೀ ಹಾನಿಯುಂಟಾಗಿದೆ ಎಂದು ಆಫ್ಘನಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ.

ಪಶ್ಚಿಮ ಕಾಬುಲ್ ನ ಶಿಯಾತ್ ಮಸೀದಿಯ ಸಮೀಪ ಈ ಪ್ರಬಲ ಸ್ಫೋಟ ಸಂಭವಿಸಿದ್ದು ಪಾರ್ಷಿಯಾ ಹೊಸ ವರ್ಷ ಆರಂಭದಲ್ಲಿ ಜನರು ನವ್ರಝು ರಜೆಯ ಆಚರಣೆಯಲ್ಲಿ ತೊಡಗಿದ್ದ ವೇಳೆ ಈ ದಾಳಿ ಸಂಭವಿಸಿದೆ.

ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ವಕ್ತಾರ ವಹೀದ್ ಮಜ್ರೊಹ್ ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಕಾರ್ ಬಾಂಬು ಸ್ಫೋಟವಾಗಿರಬೇಕೆಂದು ಪ್ರತ್ಯಕ್ಷದರ್ಶಿಗಳು ಶಂಕಿಸಿದ್ದಾರೆ.

ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ, ಆಫ್ಘಾನಿಸ್ತಾನ ಪದೇ ಪದೇ ಬಾಂಬ್ ದಾಳಿಗೆ ತುತ್ತಾಗುತ್ತಿದ್ದು ಇಲ್ಲಿ ಇಸ್ಲಾಮಿನ ಷಿಯಾ ಪಂಥದ ಅನುಯಾಯಿಗಳ ಮೇಲೆ ಗುರಿಯಾಗಿಟ್ಟುಕೊಂಡು ಪದೇ ಪದೇ ದಾಳಿ ನಡೆಯುತ್ತಿರುತ್ತದೆ.

Comments are closed.