ಅಂತರಾಷ್ಟ್ರೀಯ

ಚಿನ್ನದ ಓಲೆ ಕೊಡಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ!

Pinterest LinkedIn Tumblr

ಇಸ್ಲಾಮಾಬಾದ್: ಪತಿಯೊಬ್ಬ ತನ್ನ ಪತ್ನಿ ಚಿನ್ನದ ಓಲೆ ಕೊಡಲಿಲ್ಲವೆಂದು ಆಕೆಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಪಾಕಿಸ್ತಾನದ ಡೇರಾ ಘಾಸಿಯಲ್ಲಿ ನಡೆದಿದೆ.

ವರದಿಗಳ ಪ್ರಕಾರ ಈ ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಆಗಾಗ ಇವರ ಮಧ್ಯೆ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪತಿ ತನ್ನ ಪತ್ನಿಯನ್ನು ಚಿನ್ನದ ಓಲೆಯನ್ನು ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಹೊಡೆಯಲು ಶುರು ಮಾಡಿದ್ದಾನೆ.

ಪತಿಯ ಹೊಡೆತದಿಂದ ಮಹಿಳೆ ಜೋರಾಗಿ ಅಳುತ್ತಾ, ಕಿರುಚಾಡಲು ಶುರು ಮಾಡಿದ್ದಾಳೆ. ಆಗ ರೂಮಿನ ಹತ್ತಿರದಲ್ಲೇ ಇದ್ದ ಮಹಿಳೆಯ ತಂದೆ ಹಾಗೂ ಆಕೆಯ ಚಿಕ್ಕಪ್ಪ ರೂಮಿನ ಹತ್ತಿರ ಓಡಿ ಬಂದಿದ್ದಾರೆ. ಮಹಿಳೆಯ ತಂದೆ ಹಾಗೂ ಆಕೆಯ ಸಂಬಂಧಿಕರು ಬಾಗಿಲು ತಟ್ಟಿದ್ದರು ಆತ ರೂಮಿನ ಬಾಗಿಲನ್ನು ತೆಗೆಯಲಿಲ್ಲ. ನಂತರ ಎಲ್ಲರೂ ಸೇರಿ ಬಾಗಿಲನ್ನು ಹೊಡೆದಿದ್ದಾರೆ.

ಎಲ್ಲರೂ ರೂಮಿನೊಳಗೆ ಹೋಗಿ ನೋಡಿದ್ದಾಗ ಮಹಿಳೆ ರಕ್ತಸ್ತ್ರಾವದಿಂದ ಪ್ರಜ್ಞೆ ತಪ್ಪಿದ್ದು, ಪತಿ ಆಕೆಯ ಗುಪ್ತಾಂಗವನ್ನೇ ಕತ್ತರಿಸಿದ್ದನು. ನಂತರ ಸಂಬಂಧಿಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪೊಲೀಸರಿಗೆ ಕರೆ ಮಾಡಿದ್ದರು. ವಿಚಾರಣೆ ವೇಳೆ ಕ್ರೂರಿ ಪತಿ ತನ್ನ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ್ದಾನೆಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮಹಿಳೆಯ ಕುಟುಂಬಸ್ಥರ ಪ್ರಕಾರ ಈ ಹಿಂದೆ ಪತಿ ತನ್ನ ಪತ್ನಿಯ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಆಕೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆತ ಆಗಾಗ ತನ್ನ ಪತ್ನಿಯ ಜೊತೆ ಜಗಳವಾಡುತ್ತುದ್ದನು ಎಂದು ತಿಳಿಸಿದ್ದಾರೆ.

Comments are closed.