ಅಂತರಾಷ್ಟ್ರೀಯ

ಸಾಕಿದ್ದು ನಾಯಿ ಮರಿ ಎಂದು…ದೊಡ್ಡದಾದ  ಮೇಲೆ ಗೊತ್ತಾದಾಗ ಕಾದಿತ್ತು ಶಾಕ್ !

Pinterest LinkedIn Tumblr
ನಾಯಿ ಸಾಕುವವರಿಗೆ ಒಂದು ಹುಚ್ಚಿರುತ್ತದೆ ಎಲ್ಲಿಯಾದರೂ ಮುದ್ದಾದ ನಾಯಿ ಮರಿಗಳನ್ನು ಕಂಡರೆ ಅವುಗಳನ್ನು ಮನೆಗೆ ತಂದು ಆಶ್ರಯ ನೀಡುತ್ತಾರೆ. ಚೀನಾದ ವ್ಯಕ್ತಿ ಕಾಡಿನ ಬದಿಯಲ್ಲಿ ಮುದ್ದಾದ ನಾಯಿ ಮರಿಯನ್ನು ಕಂಡರು. ಮೈತುಂಬಾ ಕಪ್ಪು ಕೂದಲು ಹೊಂದಿದ್ದ ಅದನ್ನು ಬಿಟ್ಟುಬರಲು ಮನಸ್ಸಾಗಲಿಲ್ಲ. ಹಾಗಾಗಿ ಅದನ್ನು ಮನೆಗೆ ತಂದು ಅದಕ್ಕೆ ಹಾಲು, ಜೋಳ ತಿನ್ನಿಸಿ ಬೆಳೆಸಿದರು. ಅದು ಪಕ್ಕದ ಮನೆಯಲ್ಲೇ ಇದ್ದ ಮತ್ತೂಂದು ನಾಯಿ ಜೊತೆ ಆಟವಾಡುತ್ತಾ ಬೆಳೆಯುತ್ತಿತ್ತು.
ಅದು ತನ್ನ ಮುಂಗಾಲುಗಳನ್ನು ಎತ್ತಿ ಹಿಂಗಾಲುಗಳ ಮೇಲೆ ಸರಾಗವಾಗಿ ಓಡಾಡುತ್ತಿತ್ತು. ಅದು ಬೆಳೆದಂತೆ ಕರಡಿಯನ್ನು ಹೋಲಲು ಆರಭಿಸಿತು. ಕೇವಲ 8 ತಿಂಗಳಲ್ಲಿ 1.7 ಅಡಿ ಎತ್ತರ, 80 ಕೆಜಿ ತೂಕ ಪಡೆಯಿತು. ಬೇಸ್ತು ಬೀಳುವ ಸರದಿ ನಾಯಿ ಮರಿ ಎಂದು ತಿಳಿದು ಅದನ್ನು ಮನೆಗೆ ತಂದು ಸಾಕಿದ ವ್ಯಕ್ತಿಯದ್ದು. ಮನೆಯವರಿಗೆ ತೊಂದರೆ ಮಾಡಿರಲಿಲ್ಲ. ನೆರೆಯವರಿಗೆ ತೊಂದರೆ ಮಾಡುವ ಭೀತಿ ಯಿಂದ ಅದನ್ನು ಬೋನ್‌ ನಲ್ಲಿ ಇರಿಸಲಾಗಿತ್ತು ಎಂದಿದ್ದಾರೆ ಆ ವ್ಯಕ್ತಿ. ಇದೀಗ ಕರಡಿಯನ್ನು ವನ್ಯಜೀವಿ ರಕ್ಷಣಾ ಸಂಸ್ಥೆಯೊಂದು ಕರೆದೊಯ್ದಿದೆ.

Comments are closed.