ರಾಷ್ಟ್ರೀಯ

ಮದುವೆಯಾಗಿ ಗಂಡನ ಮನೆಗೆ ಬರುತ್ತಿದ್ದಂತೆ ಬಯಲಾಯ್ತು ವಧುವಿನ ರಹಸ್ಯ!

Pinterest LinkedIn Tumblr

ಇಂದೋರ್: ಮದುವೆಯಾಗಿ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪತ್ನಿ ಆರು ವಾರದ ಗರ್ಭಿಣಿ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕೆಂಟ್ ರೋಡ್ ನಿವಾಸಿಯಾದ ಸಿದ್ಧಾರ್ಥ್ (ಹೆಸರು ಬದಲಾಯಿಸಲಾಗಿದೆ) ಮತ್ತು ಜಾರ್ಖಂಡ್‍ನ ರಾಮ್‍ಗಡ್‍ನಲ್ಲಿರುವ ಪೂಜಾ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆದಿತ್ತು. ಮದುವೆಯಾಗಿ ಇಂದೋರ್ ನಲ್ಲಿರುವ ತನ್ನ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಲು ಶುರು ಮಾಡಿದ್ದಾಳೆ.

ನಂತರ ಸಿದ್ಧಾರ್ಥ್ ವಧು ಪೂಜಾಳನ್ನು ಮಹಿಳಾ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಪೂಜಾ 6 ವಾರದ ಗರ್ಭಿಣಿ ಎಂಬ ವಿಷಯ ತಿಳಿದು ಬಂದಿದೆ. ನಂತರ ಸಿದ್ಧಾರ್ಥ್ ಈ ವಿಷಯದ ಬಗ್ಗೆ ಪೂಜಾಳ ಹತ್ತಿರ ಕೇಳಿದ್ದಾರೆ. ಆಗ ಪೂಜಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

ಮದುವೆಯಾಗುವ ಮುಂಚೆ ನಾನು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ. ಹಾಗಾಗಿ ನಾನು ಈಗ ಗರ್ಭಿಣಿ ಆಗಿದ್ದೀನಿ ಎಂದು ಪೂಜಾ ಒಪ್ಪಿಕೊಂಡಿದ್ದಾಳೆ. ಪೂಜಾ ಸತ್ಯವನ್ನು ಒಪ್ಪಿಕೊಂಡ ಬಳಿಕ 100 ರೂ. ಸ್ಯ್ಟಾಂಪ್ ಮೇಲೂ ಬರೆದಿದ್ದಾಳೆ.

ಮದುವೆಯಾಗಿ ಮೋಸ ಹೋದ ಸಿದ್ಧಾರ್ಥ್ ಕೋರ್ಟ್ ನ ಮೊರೆ ಹೋಗಿದ್ದಾರೆ. ನಂತರ ಕೋರ್ಟ್ ಪೂಜಾಳನ್ನು ಕರೆದು ವಿಚಾರಿಸಿದಾಗ ನಾನು ಈ ಮೊದಲು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ ಎಂದು ಪೂಜಾ ಕೋರ್ಟ್‍ನಲ್ಲೂ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

ಒಂದು ಬಾರಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಮತ್ತೊಂದು ದಿನಾಂಕಕ್ಕೆ ವರ ಹಾಗೂ ವಧುವಿಗೆ ಬರಲು ಹೇಳಿದ್ದರು. ಆದರೆ ವಧು ಕೋರ್ಟ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಈ ಮದುವೆಯನ್ನು ಕಾನೂನು ಸಮ್ಮತವಾದ ಮದುವೆ ಅಲ್ಲ ಎಂದು ಆದೇಶ ನೀಡಿದೆ.

Comments are closed.