ಅಂತರಾಷ್ಟ್ರೀಯ

175 ಶತಕೋಟಿ ಡಾಲರ್‌ಗಳ ಬೃಹತ್‌ ರಕ್ಷಣಾ ಬಜೆಟ್‌ ಮಂಡಿಸಿದ ಬೀಜಿಂಗ್‌

Pinterest LinkedIn Tumblr


ಬೀಜಿಂಗ್‌: ತನ್ನ ವಾರ್ಷಿಕ ರಕ್ಷಣಾ ಆಯವ್ಯಯ ಘೋಷಿಸಿರುವ ಚೀನಾ 2018-19ರ ರಕ್ಷಣಾ ಬಜೆಟ್‌ನಲ್ಲಿ ಏರಿಕೆ ಮಾಡಿ 175 ಶತಕೋಟಿ ಡಾಲರ್‌ನಷ್ಟನ್ನು ತೆಗೆದಿರಿಸಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಶೇ 8.1ರಷ್ಟು ಏರಿಕೆ ಮಾಡಿರುವ ಚೀನಾ ಭಾರತದ ರಕ್ಷಣಾ ಬಜೆಟ್‌ನ ಮೂರು ಪಟ್ಟು ಹಣವನ್ನು ತನ್ನ ರಕ್ಷಣಾ ಪಡೆಗಳಿಗೆ ಕೊಡಮಾಡಿದೆ.

ಅಮೆರಿಕ ಬಳಿಕ ಅತ್ಯಂತ ದೊಡ್ಡ ರಕ್ಷಣಾ ಖಾರ್ಚುದಾರನಾಗಿರುವ ಚೀನಾ ಕಳೆದ ವರ್ಷ ಇದಕ್ಕೆಂದೇ 150 ಶತಕೋಟಿ ಡಾಲರ್‌ಗಳನ್ನು ತೆಗೆದಿರಿಸಿತ್ತು. ಇದೇ ವೇಳೆ 2019ಕ್ಕೆ 686 ಶತಕೋಟಿ ರಕ್ಷಣಾ ಬಜೆಟ್‌ ಬೇಕೆಂದು ಪೆಂಟಗನ್‌ ಅಮೆರಿಕ ಸರಕಾರದ ಮುಂದೆ ಕೋರಿಕೆ ಇಟ್ಟಿದೆ.

ದೇಶದ ರಕ್ಷಣಾ ಸಾಮರ್ಥ್ಯ ವೃದ್ಧಿಸಲು ಅಧ್ಯಕ್ಷ ಶೀ ಝಿನ್‌ಪಿಂಗ್‌ ಉತ್ಸುಕರಾಗಿರುವ ನಡುವೆ ರಕ್ಷಣಾ ಬಜೆಟ್‌ನಲ್ಲಿ ಏರಿಕೆ ಕಂಡಿದೆ.ಇಷ್ಟೆಲ್ಲಾ ವೆಚ್ಚ ಮಾಡಿದರೂ ಇದು ಚೀನಾದ ಬೃಹತ್‌ ಜಿಡಿಪಿ ಸಾಮರ್ಥ್ಯದ ಮುಂದೆ ನಗಣ್ಯವಾಗಿದೆ.

ಚೀನಾ ಎರಡು ಹೊಸ ಯುದ್ಧ ವಿಮಾನ ವಾಹಕಗಳ ನಿರ್ಮಾಣಕ್ಕೆ ಮುಂದಾಗಿದ್ದು ಹೊಸ ತಲೆಮಾರಮಿನ ಯುದ್ಧ ವಿಮಾನಗಳನ್ನು ತನ್ನ ಪಡೆಗಳಿಗೆ ಸೇರಿಸಿಕೊಳ್ಳಲು ನೋಡಲಿದೆ.

ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಭಾರತ 46 ಶತಕೋಟಿ ಡಾಲರ್‌ಗಳನ್ನು ರಕ್ಷಣೆಗೆಂದು ತೆಗೆದಿರಿಸಿದೆ.

Comments are closed.