
ವಾಷಿಂಗ್ಟನ್: ವಂಚಕ ನೀರವ್ ಮೋದಿ ತನ್ನ ಎಲ್ಲೆಯೊಳಗಿರುವುದಾಗಿ ಅಮೆರಿಕನ್ ಮಾಧ್ಯಮಗಳು ಮಾಡಿದ್ದ ವರದಿಯನ್ನು ಅಮೆರಿಕ ಸರಕಾರದ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ.
“ನೀರವ್ ಮೋದಿ ಅಮೆರಿದಲ್ಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಮನಿಸಿದ್ದೇವೆ. ಆದರೆ ಈ ಕುರಿತು ಖಾತ್ರಿಯಿಲ್ಲ” ಎಂದು ಅಮೆರಿಕ ಸರಕಾರದ ವಕ್ತಾರರು ತಿಳಿಸಿದ್ದಾರೆ.
ನೀರವ್ನನ್ನು ಪತ್ತೆ ಮಾಡಲು ಅಮೆರಿಕ ಸಹಕಾರ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಕ್ತಾರ “ಭಾರತೀಯ ಅಧಿಕಾರಿಗಳಿಗೆ ಕಾನೂನು ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡಲು ನ್ಯಾಯಾಂಗ ಇಲಾಖೆಗೆ ಸೂಚಿಸುತ್ತೇವೆ” ಎಂದು ಆಂತರಿಕ ವ್ಯವಹಾರಗಳ ಇಲಾಖೆ ತಿಳಿಸಿದೆ.
ತನ್ನ ಕೆಲ ಉದ್ಯೋಗಿಗಳನ್ನು ಶಾಮೀಲಾಗಿಸಿಕೊಂಡು ನೀರವ್ ಮೋದಿ ಹಾಗು ಆತನ ಸಹೋದರ ಸಂಬಂಧಿ ಮೇಹುಲ್ ಚೋಕ್ಸಿ 12,000 ಕೋಟಿಗೂ ಅಧಿಕ ಮೊತ್ತದ ವಂಚನೆ ಮಾಡಿರುವುದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ನೀಡಿತ್ತು.
ವಿದೇಶೀ ಮೂಲಗಳಿಂದ ಸಾಲ ಪಡಯಲು ಅಗತ್ಯವಿದ್ದ ಗ್ಯಾರಂಟಿ ಪತ್ರವನ್ನು ಪಂಜಾಬ್ ಬ್ಯಾಂಕ್ನಿಂದ ಪಡೆಯುವ ವೇಳೆ ನೀರವ್ ಅವ್ಯವಹಾರಕ್ಕೆ ಮುಂದಾಗಿದ್ದಾನೆ. ಪ್ರಕರಣ ಸಂಬಂಧ ಸಿಬಿಐ ಹಾಗು ಇಡಿ ತಲಾ ಎರಡು ಎಫ್ಐಆರ್ ದಾಖಲಿಸಿವೆ.
ಆಭರಣಗಳ ಮಾರಾಟಗಾರರಾದ ಮೋದಿ ಹಾಗು ಆತನ ಚಿಕ್ಕಪ್ಪ ಚೋಕ್ಸಿ ಜನವರಿಯಲ್ಲೇ ಪಲಾಯನ ಮಾಡಿದ್ದಾರೆ. ಪಿಎನ್ಬಿಯಿಂದ ಸಿಬಿಐಗೆ ದೂರು ದಾಖಲಾಗುವ ಮುನ್ನವೇ ಇಬ್ಬರೂ ಪಲಾಯನಗೈದಿದ್ದಾರೆ.
ಹಗರಣದ ತನಿಖೆಗೆ ಸಹಕರಿಸುವಂತೆ ಸಿಬಿಐ ಕೋರಿಕೊಂಡ ವೇಳೆ “ನನಗೆ ವಿದೇಶದಲ್ಲಿ ವ್ಯವಹಾರವಿದೆ” ಎಂದಿದ್ದ ಮೋದಿ ಪಲಾಯನಗೈದಿದ್ದಾನೆ. ಬಳಿಕ ತಾನಿರುವ ದೇಶದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಿಕೊಳ್ಳಲು ಸಿಬಿಐ ಬಳಿಕ ಸೂಚಿಸಿತ್ತು.
ಮೋದಿ ಹಾಗು ಆತನ ಚಿಕ್ಕಪ್ಪ ಚೋಕ್ಸಿ ವಿರುದ್ಧ ಲುಕ್ ಔಟ್ ನೋಟಿಸ್(ಬ್ಲೂ ಕಾರ್ನರ್)ಅನ್ನು ಹೊರಡಿಸಲಾಗಿದ್ದು ದೇಶದ ಎಲ್ಲ ಬಂದರುಗಳು ಹಾಗು ವಿಮಾನ ನಿಲ್ದಾಣಗಳಲ್ಲೂ ಅಲರ್ಟ್ ಹೊರಡಿಸಲಾಗಿದೆ.
Comments are closed.