ಅಂತರಾಷ್ಟ್ರೀಯ

ನರೇಂದ್ರ ಮೋದಿ ಶೈಲಿಯಲ್ಲಿ ನಮಸ್ಕರಿಸಿದ ಟ್ರಂಪ್‌

Pinterest LinkedIn Tumblr


ವಾಷಿಂಗ್‌ಟನ್‌: ಹಾರ್ಲೆ ಡೇವಿಡ್‌ಸನ್‌ ಮೋಟರ್‌ಬೈಕ್‌ಗಳ ಆಮದಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವ ಭಾರತದ ನರೇಂದ್ರ ಮೋದಿ ಸರಕಾರದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದ್ಭುತ ವ್ಯಕ್ತಿ. ಈ ಮುನ್ನ ನನಗೆ ಕರೆ ಮಾಡಿದ್ದ ಅವರು ಆಮದು ಸುಂಕದಲ್ಲಿ ಶೇ 50ರಷ್ಟು ತಗ್ಗಿಸುವುದಾಗಿ ಹೇಳಿದ್ದರು. ನಾನು ಇದಕ್ಕೆ ಸಮ್ಮತಿಸಿದ್ದೆ. ಆದರೆ ಇದರಿಂದ ನಮಗೆ ಏನೂ ಸಿಗುತ್ತಿಲ್ಲ” ಎಂದು ಟ್ರಂಪ್‌ ಹೇಳಿದ್ದಾರೆ.

ಶ್ವೇತ ಭವನದಲ್ಲಿ ಅಮೆರಿಕದ ಎಲ್ಲ ರಾಜ್ಯಗಳ ರಾಜ್ಯಪಾಲರ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌ ಮೋದಿಯಂತೆ ಅಣಕ ಮಾಡಿ ನಮಸ್ತೇ ಎಂದು “ಅವರು ಈ ವಿಚಾರವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಅವರೊಬ್ಬ ಸುಂದರ ವ್ಯಕ್ತಿ. ನಾವು ಆಮದು ಸುಂಕದಲ್ಲಿ ಶೇ 75ರಷ್ಟು ಇಳಿಕೆ ಮಾಡಿದ್ದೇವೆ ಎಂದು ಬಳಿಕ ಶೇ 50ರಷ್ಟು ಎಂದಿದ್ದರು. ಬಳಿಕ ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.

ಇದರಿಂದ ನನಗೆ ಥ್ರಿಲ್‌ ಆಗಬೇಕಿತ್ತೇನು?” ಎಂದಿದ್ದಾರೆ.

ಈ ಮುನ್ನ ಜನವರಿಯಲ್ಲಿ ವರದಿ ಮಾಡಿದ್ದ ಅಮೆರಿಕ ಮಾಧ್ಯಮವೊಂದು ಭಾರತೀಯ ಶೈಲಿಯಲ್ಲಿ ಮಾತನಾಡಿ ಮೋದಿಯನ್ನು ಟ್ರಂ‌ಪ್‌ ಅಣಕ ಮಾಡುತ್ತಾರೆ ಎಂದಿತ್ತು.

ಅಮೆರಿಕನ್‌ ನಿರ್ಮಿತ ಮೋಟರ್‌ ಬೈಕ್‌ಗಳ ಮೇಲೆ ಭಾರತವೇನಾದರೂ ಆಮದು ಸುಂಕ ಹೆಚ್ಚಿಸಿದಲ್ಲಿ ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ನಿರ್ಮಿತವಾದ ಮೋಟರ್‌ಬೈಕ್‌ಗಳ ಮೇಲೆ ಅಮೆರಿಕವೂ ಆಮದು ಸುಂಕ ಹೆಚ್ಚಿಸಲಿದೆ ಎಂದು ಟ್ರಂಪ್‌ ಈ ಮುನ್ನ ಟ್ರಂಪ್‌ ಹೇಳಿದ್ದರು.

ವ್ಯಾಪಾರದ ವಿಚಾರವಾಗಿ ಟ್ರಂಪ್‌ ಈ ರೀತಿಯ ಧಮ್ಕಿಗಳನ್ನು ಸಾಕಷ್ಟು ದೇಶಗಳೀಗೆ ನೀಡುತ್ತಲೇ ಬಂದಿದ್ದಾರೆ. ಅಲ್ಲದೇ ಭೂಮಿ ಮೇಲಿರುವ ಪ್ರತಿ ದೇಶವೂ ಅಮೆರಿಕದಿಂದ ಲಾಭ ಪಡೆಯುತ್ತಿದೆ ಎಂದು ಟ್ರಂಪ್ ದೂರಿದ್ದರು. ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಂತೂ ಟ್ರಂಪ್‌ ಇದೇ ವಿಚಾರವಾಗಿ ಚೀನಾ ವಿರುದ್ಧ ಹರಿಹಾಯುತ್ತಲೇ ಬಂದಿದ್ದರು.

ಈ ಹಿಂದೆ ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲು ಭಾರತ ಹಾಗು ಚೀನಾ ಕಾರಣ ಎಂದು ಟ್ರಂಪ್‌ ದೂರಿದ್ದರು.

Comments are closed.