ಅಂತರಾಷ್ಟ್ರೀಯ

ಲೈವ್‌ ಪ್ರಸಾರದಲ್ಲಿ ಮಗುವಿಗೆ ಜನ್ಮ

Pinterest LinkedIn Tumblr


ಯಾವುದಾದರೂ ರೇಡಿಯೋ ಚಾನೆಲ್‌ನ ಕಾರ್ಯಕ್ರಮವನ್ನು ತಪ್ಪದೇ ಕೇಳುತ್ತಿದ್ದರೆ ಕಾರ್ಯಕ್ರಮದ ನಿರೂಪಕರು ನಿಮಗೆ ಚಿರಪರಿಚಿತರು ಎಂಬಂಥ ಭಾವನೆ ಮೂಡುತ್ತದೆ. ನಿರೂಪಕರಿಗೂ ಅವರ ಕೆಲ ಫ್ಯಾನ್‌ಗಳು ಅಷ್ಟೇ ಚಿರಪರಿಚಿತರಾಗಿರುತ್ತಾರೆ. ಫ್ಯಾನ್‌ಗಳ ಜೊತೆಗಿನ ತನ್ನ ಸಂಬಂಧವನ್ನು ಮತ್ತೂಂದು ಹಂತಕ್ಕೆ ಕೊಂಡೊಯ್ಯುವ ಯೋಚನೆಯನ್ನು ಅಮೆರಿಕದ ಸೇಂಟ್‌ ಲೂಯಿಸ್‌ನ ರೇಡಿಯೋ ನಿರೂಪಕಿ ಕ್ಯಾಸಿಡೆ ಪ್ರಾಕ್ಟರ್‌ ಮಾಡಿದ್ದರು.

ಅದಕ್ಕಾಗಿ ಅವರು ಮಾಡಿದ ಕೆಲಸವೇನೆಂದರೆ, ರೇಡಿಯೊ ಲೈವ್‌ ಪ್ರಸಾರದಲ್ಲಿಯೇ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದು. ಮಗುವಿನ ಮೊದಲ ವಿಶೇಷ ಅಳುವನ್ನು ಅವರ ಶೋತೃಗಳು ಕೇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಶೋತೃಗಳಿಂದಲೇ ತನ್ನ ಮಗನಿಗೆ ಹೆಸರು ಕೇಳಿ, ಜೇಮ್ಸನ್‌ ಎಂದು ನಾಮಕರಣವನ್ನೂ ಮಾಡಿದ್ದಾರೆ.

-ಉದಯವಾಣಿ

Comments are closed.