ರಷ್ಯಾ : ಒಣಗದ ಬಟ್ಟೆಗಳನ್ನು ರೈಲು ಮತ್ತು ಬಸ್ಸಿನ ಪ್ರಯಾಣದ ವೇಳೆ ಕಿಟಕಿಗಳಿಗೆ ಹಾಕುವುದನ್ನು ಕಂಡಿರುತ್ತೇವೆ. ಆದರೆ, ವಿಮಾನದಲ್ಲಿ ಬಟ್ಟೆ ಒಣಗಲು ಹಾಕಿರುವುದನ್ನು ಕಂಡಿರಲು ಸಾಧ್ಯವೇ ಇಲ್ಲ. ವಿಮಾನದಲ್ಲಿ ಮಹಿಳೆಯೊಬ್ಬರು ಪ್ರಯಾಣಿಕರೆದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.
ಈ ಘಟನೆ ಫೆಬ್ರವರಿ 14 ರಂದು ಟರ್ಕಿಯ ಅಂಟಾಲ್ಯಾ ದಿಂದ ಮಾಸ್ಕೋ ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದೆ. ಮಹಿಳೆ ಒಳಉಡುಪು ಒಣಗಿಸುತ್ತಿರುವ ದೃಶ್ಯವನ್ನು ಹಿಂಬದಿ ಕುಳಿತ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಹಿಳೆ ಒಳಉಡುಪನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಎಸಿ ಕೆಳಗಡೆ ಒಣಗಿಸುತ್ತಿರುವುದನ್ನು ಕಾಣಬಹುದು. ಆದ್ರೆ ಮಹಿಳೆ ವಿಮಾನದಲ್ಲಿ ಈ ರೀತಿ ನಡೆದುಕೊಂಡಾಗ ಉಳಿದ ಪ್ರಯಾಣಿಕರಿಗೆ ಅಚ್ಚರಿಯೆನಿಸಿದ್ರೂ, ಮಹಿಳೆಯನ್ನ ಪ್ರಶ್ನಿಸದೇ ಸುಮ್ಮನೆ ಕುಳಿತಿದ್ದರು ಎಂದು ವರದಿಯಾಗಿದೆ.
ಮಹಿಳೆ ಯಾವುದೇ ಮುಜುಗರವಿಲ್ಲದೇ ಪ್ರಯಾಣಿಕರ ಎದುರೇ ಸುಮಾರು 20 ನಿಮಿಷಗಳ ಕಾಲ ಒಳಉಡುಪು ಕೈಯಲ್ಲಿ ಹಿಡಿದುಕೊಂಡೇ ಎಸಿ ಕೆಳಗಡೆ ಒಣಗಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದು, ಮಹಿಳೆಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.