ಜಲಂಧರ್(ಪಂಜಾಬ್): ಮದವೆಯಾದರೂ ಗಂಡನೋರ್ವ ಪರ ಸ್ತ್ರೀಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಆಕ್ರೋಶಗೊಂಡು ಪತ್ನಿ ಆತನ ಜನನಾಂಗ ಕತ್ತರಿಸಿರುವ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದ್ದಾಗಿ ವರದಿಯಾಗಿದೆ.
ಸೋಮವಾರ ರಾತ್ರಿ ಗಂಡ ನಿದ್ದೆ ಮಾಡುತ್ತಿದ್ದ ವೇಳೆ ಹೆಂಡತಿ ಅವನ ಮೇಲೆ ಹಲ್ಲೆ ಮಾಡಿ ತದನಂತರ ಚಾಕುವಿನಿಂದ ಆತನ ಜನನಾಂಗ ಕತ್ತರಿಸಿದ್ದಾಳೆ. ಜತೆಗೆ ಆತನನ್ನ ಮನೆಯ ಶೌಚಾಲಯವೊಂದರಲ್ಲಿ ಕೂಡಿ ಹಾಕಿದ್ದಾಳೆ. ಜಲಂಧರ್‌ನ ಜೋಗಿಂದರ್ ನಗರ ನಿವಾಸಿ ಆಜಾದ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಾರ ಪ್ರಮಾಣದಲ್ಲಿ ರಕ್ತ ಸ್ರಾವವಾಗಿರುವ ಕಾರಣ ಆತನ ಸ್ಥಿತಿ ಗಂಭೀರವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇರೊಬ್ಬ ಮಹಿಳೆಯೊಂದಿಗೆ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿ, ಈ ರೀತಿಯಾಗಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.