ಅಂತರಾಷ್ಟ್ರೀಯ

ಗುಂಡಿನ ದಾಳಿ: 17 ವಿದ್ಯಾರ್ಥಿಗಳ ಮಾರಣ ಹೋಮ

Pinterest LinkedIn Tumblr


ಅಮೆರಿಕ: ಶಾಲೆಯೊಂದರಲ್ಲಿ ಹಳೇ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿ ನೆತ್ತರು ಹರಿಸಿದ್ದಾನೆ.

ಬುಧವಾರ ಸೆಮಿ-ಆಟೋಮ್ಯಾಟಿಕ್‌ ರೈಫಲ್‌‌ನಿಂದ ನಡೆಸಿದ ಗುಂಡಿನ ದಾಳಿಯಲ್ಲಿ 17 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫ್ಲೋರಿಡಾದ ಮಾರ್ಜೊರಿ ಸ್ಟೋನ್ಮಸ್‌ ಡೌಗ್ಲಾಸ್‌ ಹೈಸ್ಕೂಲ್​​ನಲ್ಲಿ ದುರ್ಘಟನೆ ನಡೆದಿದೆ. ಆರೋಪಿ ನಿಕೋಲಸ್​ ಕ್ರೂಸ್​(19)ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಶಿಸ್ತಿನ ವರ್ತನೆ ಹಿನ್ನೆಲೆ ಶಾಲೆಯಿಂದ ಅಮಾನತುಗೊಂಡಿದ್ದ ಎಂದು ತಿಳಿದು ಬಂದಿದೆ.

ಈ ದಾಳಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಂಡಿಸಿದ್ದು, ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮಕ್ಕಳು, ಶಿಕ್ಷಕರು ಸೇರಿ ಯಾರೂ ಕೂಡ ಅಮೆರಿಕನ್‌ ಶಾಲೆಗಳು ಅಸುರಕ್ಷಿತವೆಂದು ಭಾವಿಸಬಾರದು. ದಾಳಿಕೋರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments are closed.