ಅಂತರಾಷ್ಟ್ರೀಯ

ಭಾರತಕ್ಕೆ ಆತಂಕ: ಪಾಕ್​ನಿಂದ ಹೊಸ ಮಾದರಿ ಅಣ್ವಸ್ತ್ರ ತಯಾರಿ

Pinterest LinkedIn Tumblr


ಪಾಕಿಸ್ತಾನ: ಉಗ್ರರಿಗೆ ಆಶ್ರಯ ನೀಡುವ ಮೂಲಕ ಜಗತ್ತಿಗೆ ಕಂಟಕವಾಗಿರುವ ಪಾಕ್​ ಈಗ ಹೊಸ ಮಾದರಿಯ ಅಣ್ವಸ್ತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಸಣ್ಣ ಯುದ್ಧಕ್ಕೆ ಬಳಕೆಯಾಗುವ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಡ್ಯಾನ್​ ಕೋಟ್ಸ್​ ಮಾಹಿತಿ ನೀಡಿದೆ.

ಸಮುದ್ರ ಆಧರಿತ ಕ್ರೂಸ್ ಕ್ಷಿಪಣಿ, ಏರ್​​ ಕ್ರೂಸ್​ ಕ್ಷಿಪಣಿ ಮತ್ತು ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಪಾಕ್​ ಅಭಿವೃದ್ಧಿಪಡಿಸುತ್ತಿದೆ. ಇದು ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆ ಎಂದು ಡ್ಯಾನ್​ ಕೋಟ್ಸ್​ ತಿಳಿಸಿದೆ.

ಇನ್ನು ಪಾಕ್​ ಪೋಷಿತ ಉಗ್ರ ಸಂಘಟನೆಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಇನ್ನಷ್ಟು ವಿಧ್ವಂಸಕ ಕೃತ್ಯವೆಸಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ​ ಮತ್ತಷ್ಟು ವಿಷಮಗೊಳ್ಳಲಿದೆ​ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Comments are closed.