ಅಂತರಾಷ್ಟ್ರೀಯ

ಈ ಕಾರಣಕ್ಕಾಗಿ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಕಿಡಿ !

Pinterest LinkedIn Tumblr

ನವದೆಹಲಿ: ಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಭಾರತ ಹೇರಿರುವ ದುಬಾರಿ ಆಮದು ಸುಂಕಕ್ಕೆ ಸಂಬಂಧಿಸಿದಂತೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಉಕ್ಕಿನ ಉದ್ಯಮದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಡೊನಾಲ್ಡ್ ಟ್ರಂಪ್ ಈ ವೇಳೆ ಬೈಕ್ ಮೇಲೆ ಆಮದು ಸುಂಕ ಏರಿಕೆ ಮಾಡಿರುವ ವಿವಿಧ ದೇಶಗಳ ವಿರುದ್ಧ ಕಿಡಿಕಾರಿದರು.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ವಿದೇಶಿ ಬೈಕ್ ಗಳ ಮೇಲಿನ ಆಮದು ಸುಂಕವನ್ನು ಶೇ.50ಕ್ಕೆ ಇಳಿಖೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಬೈಕ್ ಗಳ ಮೇಲೆ ವಿವಿಧ ದೇಶಗಳು ವಿಧಿಸಿರುವ ಆಮದು ಸಂಕ ಅನ್ಯಾಯದ ನಿರ್ಧಾರವಾಗಿದೆ. ಅಮೆರಿಕದಲ್ಲಿ ವಿದೇಶಿ ಬೈಕ್ ಗಳಿಗೆ ಶೂನ್ಯ ಆಮದು ಸುಂಕವಿದ್ದು, ಇದೇ ರೀತಿ ಮೆದು ಧೋರಣೆಯನ್ನು ಇತರೆ ದೇಶಗಳೂ ಅನುಕರಿಸಬೇಕು ಎಂದು ಹೇಳಿದರು.

ವಿದೇಶಗಳಲ್ಲಿ ಮಾರಾಟವಾಗುವ ನಮ್ಮ ದೇಶದ ಬೈಕ್ ಗಳಿಗೆ ನಾವು ದುಬಾರಿ ಶುಲ್ಕವನ್ನು ತೆರುತ್ತಿದ್ದೇವೆ. ಈ ದೇಶಗಳ ಹೆಸರು ಹೇಳಲು ಇಚ್ಛಿಸುವುದಿಲ್ಲ. ಆದರೆ ಈ ಪಟ್ಟಿಯಲ್ಲಿ ಭಾರತ ಕೂಡ ಸೇರಿರಬಹುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದಾಗ ಅವರು ಹಾರ್ಲೆ ಡೇವಿಡ್ಸನ್ ಬೈಕ್ ನ ಆಮದು ಸುಂಕವನ್ನು ಶೇ.75ರಿಂದ ಶೇ.50ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು.

ಆದರೆ ನನ್ನ ಅಭಿಪ್ರಾಯದಂತೆ ಈ ಪ್ರಮಾಣ ಇನ್ನೂ ಕಡಿತ ಮಾಡಬಹುದಾಗಿತ್ತು. ಅಮೆರಿಕಕ್ಕೆ ಬರುವ ವಿದೇಶಿ ಬೈಕ್ ಗಳ ಮೇಲಿನ ಆಮದು ಸುಂಕ ಎಷ್ಟು ಗೊತ್ತೆ..? ಶೂನ್ಯ.. ಅಮೆರಿಕದಲ್ಲಿ ಕೆಲ ವಿದೇಶಿ ಬೈಕ್ ಗಳ ಮೇಲೆ ಯಾವುದೇ ರೀತಿಯ ಸುಂಕ ವಿಧಿಸುತ್ತಿಲ್ಲ. ಇಂತಹುದೇ ನಿರ್ಧಾರಗಳನ್ನು ಅಮೆರಿಕದ ವಾಣಿಜ್ಯ ಮಿತ್ರ ರಾಷ್ಟ್ರಗಳೂ ಕೈಗೊಳ್ಳಬೇಕು ಎಂದು ಟ್ರಂಪ್ ಆಗ್ರಹಿಸಿದರು.

Comments are closed.