ಅಂತರಾಷ್ಟ್ರೀಯ

ತೈವಾನ್’ನಲ್ಲಿ ಪ್ರಬಲ ಭೂಕಂಪ: 2 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

Pinterest LinkedIn Tumblr

ತೈಪೆ: ತೈವಾನ್’ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಪರಿಣಾಮ ಇಬ್ಬರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು ಬುಧವಾರ ತಿಳಿದುಬಂದಿದೆ.

ಕಳೆದ ರಾತ್ರಿ 11.50ರ ಸುಮಾರಿಗೆ ಭೂಕಂಪ ಸಂಭವಿಸಿದೆ. ತೈವಾನ್’ನ ಬಂದರು ನಗರ ಹುವಾಲಿನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ ಹೋಟೆಲ್ ಕಟ್ಟಡ ಸೇರಿದಂತೆ ಕೆಲವು ಕಟ್ಟಡಗಳು ಸೇರಿದಂತೆ ಕೆಲವು ಕಟ್ಟಡಗಳು ಕುಸಿದು ಬಿದ್ದಿವೆ. ಕುಸಿದ ಕಟ್ಟಡದಿಂದ 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 21 ಕಿ.ಮೀ ವ್ಯಾಪ್ತಿಯಲ್ಲಿ 6.4ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

ಕುಸಿದಿರುವ ಹೋಟೆಲ್ ಒಂದರಲ್ಲಿ 30 ಮಂದಿ ಸಿಲುಕಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಭೂಕಂಪ ಹಿನ್ನಲೆಯಲ್ಲಿ ಹೆದ್ದಾರಿಗಳಲ್ಲೂ ಬಿರುಕು ಉಂಟಾಗಿರುವುದು ಕಂಡು ಬಂದಿದೆ.

ಕಳೆದ 3 ದಿನಗಳಿಂದ ಪ್ರದೇಶದಲ್ಲಿ ಸುಮಾರು 100ರಷ್ಟು ಸಣ್ಣ ಪ್ರಮಾಣದ ಕಂಪನ ಸಂಭವಿಸುತ್ತಿತ್ತು ಎನ್ನಲಾಗಿದೆ. 2 ವರ್ಷಗಳ ಹಿಂದೆ ಇದೇ ಪ್ರಮಾಣದ ಭೂಕಂಪನ ನಡೆದು, ದಕ್ಷಿಣ ತೈವಾನ್ ನಗರ ತೈನಾನ್’ನಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

Comments are closed.