ಅಂತರಾಷ್ಟ್ರೀಯ

ಕಾಶ್ಮೀರ ಸಮಸ್ಯೆ ಬಗೆಹರಿಸಲು ರಾಜೀವ್, ಬೇನಜೀರ್‌ ಪ್ರಯತ್ನಿಸಿದ್ದರು: ಆಸೀಫ್‌ ಅಲಿ ಜರ್ದಾರಿ

Pinterest LinkedIn Tumblr


ಲಾಹೋರ್‌: ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ಕಾಶ್ಮೀರ ಸಮಸ್ಯೆ ಬಗೆಹರಿಸಲು ರಾಜೀವ್‌ ಗಾಂಧಿ ಹಾಗೂ ಬೇನಜೀರ್ ಭುಟ್ಟೋ ಮುಂದಾಗಿದ್ದರು..

ಈ ವಿಷಯವನ್ನು ತಿಳಿಸಿದ್ದು ಬೇರಾರೂ ಅಲ್ಲ ಬೇನಜೀರ್‌ ಭುಟ್ಟೋ ಅವರ ಪತಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸೀಫ್‌ ಅಲಿ ಜರ್ದಾರಿ.

ಪಾಕಿಸ್ತಾನದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಆಸೀಪ್‌ ಅಲಿ ಜರ್ದಾರಿ, ಕಾಶ್ಮೀರ ವಿಷಯದ ಕುರಿತು ಪರಿಹಾರ ಕಂಡುಕೊಳ್ಳಲು ರಾಜೀವ್‌ ಗಾಂಧಿ ಮತ್ತು ಬೇನಜೀರ್ ಭುಟ್ಟೋ ಪ್ರಯತ್ನಿಸಿದ್ದರು ಎಂದರು.

1990ರಲ್ಲಿ ಕಾಶ್ಮೀರ ವಿಷಯದ ಕುರಿತು ರಾಜೀವ್‌ ಗಾಂಧಿ, ಬೇನಜೀರ್‌ ಭುಟ್ಟೋ ಹಲವು ಬಾರಿ ಚರ್ಚಿಸಿದ್ದರು. ಜನರಲ್‌ ಜಿಯಾ ಉಲ್‌ ಹಕ್‌ ಸೇರಿದಂತೆ ಯಾರೊಬ್ಬರೂ ಈ ವಿಷಯವ ಪ್ರಸ್ತಾವ ಮಾಡಿಲ್ಲ. ಕಾಶ್ಮೀರ ವಿಷಯಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಬೇನಜೀರ್‌ ಭುಟ್ಟೋಗೆ ರಾಜೀವ್‌ ಗಾಂಧಿ ಹೇಳಿದ್ದರು ಎಂದು ಜರ್ದಾರಿ ಮೆಲುಕು ಹಾಕಿದರು.

ಭಾರತದಲ್ಲಿ ಚುನಾವಣೆ ನಡೆಯುತ್ತಿದ್ದು ಅಧಿಕಾರಕ್ಕೆ ಬಂದ ಮೇಲೆ ಈ ಬಗ್ಗೆ ಚರ್ಚಿಸೋಣ ಎಂದು ರಾಜೀವ್‌ ಗಾಂಧಿ ಹೇಳಿದ್ದರು. ಆದರೆ ಚುನಾವಣೆ ಪ್ರಚಾರದ ಮೇಲೆ ಅವರು ಹತ್ಯೆಗೀಡಾದರು ಎಂದು ಜರ್ದಾರಿ ತಿಳಿಸಿದರು.

ಜನರಲ್‌ ಪರ್ವೇಜ್‌ ಮುಷರಫ್‌ ಕೂಡ ಒಮ್ಮೆ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದರು. ಆದರೆ ಇತರೆ ಜನರಲ್‌ಗಳು ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ ಎಂದು ಜರ್ದಾರಿ ವಿವರಿಸಿದರು.

ಆದರೆ ನವಾಜ್‌ ಷರೀಫ್‌ ಎಂದಿಗೂ ಕಾಶ್ಮೀರ ವಿಷಯದ ಬಗ್ಗೆ ಪ್ರಸ್ತಾವ ಮಾಡಲಿಲ್ಲ. ಈಗ ಅವರು ನರೇಂದ್ರ ಮೋದಿಯ ಆಪ್ತರಾಗಿದ್ದರು ಈ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಕಾಶ್ಮೀರಿಗಳಿಗೆ ಮೋಸ ಮಾಡಿದ್ದಕ್ಕೆ ನವಾಜ್‌ ಷರೀಫ್‌ಗೆ ತಕ್ಕ ಶಿಕ್ಷೆಯಾಗಿದೆ ಎಂದು ಜರ್ದಾರಿ ತಿಳಿಸಿದರು.

Comments are closed.