
ಶಿಲ್ಲಾಂಗ್: 4 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ದಂಪತಿಗೆ ನಗದು ಬಹುಮಾನ ನೀಡುವುದಾಗಿ ಕ್ರೈಸ್ತರ ಸಂಖ್ಯೆ ಅಧಿಕವಾಗಿರುವ ಮಿಜೋರಾಂ ಲುಂಗ್ಲೆ ಬಾಜಾರ್ ವೆಂಗ್ ಬ್ಯಾಪ್ಟಿ ಸ್ಟ್ ಚರ್ಚ್ ಘೋಷಿಸಿದೆ.
4ನೇ ಮಗುವಿಗೆ 4000 ರು. ಮತ್ತು 5ಕ್ಕಿಂತ ಹೆಚ್ಚು ಮಕ್ಕಳಾದಲ್ಲಿ 5000 ರು. ನೀಡುವುದಾಗಿ ಚರ್ಚ್ ತಿಳಿಸಿದೆ. ಮಿಜೊರಾಂನಲ್ಲಿ ಜನನ ಪ್ರಮಾಣ ಕಡಿಮೆಯಿರುವುದು, ಮಿಜೊ ಆದಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಚರ್ಚ್‌ಗಳಲ್ಲೂ ಈ ಬಗ್ಗೆ ಕಳವಳ ಉಂಟಾಗಿದೆ. ಹೀಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಚರ್ಚ್‌ನ ಕಾರ್ಯದರ್ಶಿ ಯೊಬ್ಬರು ತಿಳಿಸಿದ್ದಾರೆ.
Comments are closed.