
ಮೆಕ್ಸಿಕೊ ನಗರದ ಝೋಕಲೊ ವೃತ್ತದಲ್ಲಿ ಬರೋಬ್ಬರಿ ಎರಡೂವರೆ ಲಕ್ಷ ಜನ ಸೇರಿದ್ದರು. ಇವರೆಲ್ಲಾ ಸೇರಿದ್ದು ಇಲ್ಲಿಯ ಸಾಂಪ್ರದಾಯಿಕ ಎಪಿಫ್ಯಾನಿ ದಿನದ ಅಂಗವಾಗಿ ಈ ವೃತ್ತದಲ್ಲಿ ಹಂಚಲಾಗುವ “ರೋಸ್ಕ ದೆ ರೆಯೇಸ್’ ಕೇಕ್ ತಿನ್ನಲು. ಇಷ್ಟು ಜನರಿಗೆ ಸಾಕಾಗುವಷ್ಟು ಕೇಕ್ ಹೇಗೆ ತಯಾರಿಸಿದರು ಎಂದು ನಿಮಗೆ ಆಶ್ಚರ್ಯವಾಗಬಹುದು.
1.44 ಕಿಲೋ ಮೀಟರ್ ಉದ್ದದ ಬರೋಬ್ಬರಿ 9,372 ಟನ್ ತೂಕದ ರೋಸ್ಕ ಕೇಕನ್ನು ಸುಮಾರು 2,142 ಬಾಣಸಿಗರು ತಯಾರಿಸಿದ್ದರು. ಈ ಕೇಕಿನ ಒಂದು ಭಾಗ ಸಕ್ಕರೆ ರಹಿತವಾಗಿ ತಯಾರಿಸಬೇಕು ಎಂದು ಮೆಕ್ಸಿಕೊ ಆಡಳಿತ ಹೇಳಿತ್ತು. ಹೀಗಾಗಿ ಎಲ್ಲಾ ವಯೋಮಾನದ ಜನರೂ ಇಲ್ಲಿ ಜಮಾಯಿಸಿದ್ದರು.
-ಉದಯವಾಣಿ
Comments are closed.