
ನ್ಯೂಯಾರ್ಕ್ : ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತನ್ನ ಅಪರಾಧ ಕೃತ್ಯವನ್ನು ಒಪ್ಪಿಕೊಂಡ 25ರ ಹರಯದ ಭಾರತೀಯ ಕ್ರೀಡಾಪಟು ವಿಚಾರಣೆಯನ್ನು ತಪ್ಪಿಸಿಕೊಂಡು ಇದೀಗ ಭಾರತಕ್ಕೆ ಗಡೀಪಾರಾಗುವುದನ್ನು ಎದುರು ನೋಡುತ್ತಿದ್ದಾನೆ.
ಕಾಶ್ಮೀರದ ಸ್ನೋ-ಶೂ ರೇಸರ್ ಆಗಿರುವ ಕ್ರೀಡಾ ಪಟು ತನ್ವೀರ್ ಹುಸೇನ್, 12 ವರ್ಷ ಪ್ರಾಯದ ಬಾಲಕಿಯನ್ನು ಬಲವಾಗಿ ಅಪ್ಪಿ ಮುತ್ತು ಕೊಟ್ಟು ಆಕೆಯ ಗುಪ್ತಾಂಗವನ್ನು ಸ್ಪರ್ಶಿಸಿದ ಅಪರಾಧ ಎಸಗಿದ್ದ; ಈ ವರ್ಷ ಫೆಬ್ರವರಿ 27ರಂದು ಈ ಘಟನೆ ನಡೆದ ಬಳಿಕ ಆತನನ್ನು ಮಾರ್ಚ್ 1ರಂದು ಬಂಧಿಸಲಾಗಿತ್ತು.
ಫೆ.23 ಮತ್ತು 25ರ ನಡುವೆ ನ್ಯೂಯಾರ್ಕ್ನಲ್ಲಿ ನಡೆದಿದ್ದ ಸ್ಯಾರನಾಕ್ ಲೇಕ್ನಲ್ಲಿನ ನಡೆಯಲಿದ್ದ ವಿಶ್ವ ಸ್ನೋ ಶೂ ರೇಸ್ನಲ್ಲಿ ಪಾಲ್ಗೊಳ್ಳಲು ಆರೋಪಿಯು ಕಾಶ್ಮೀರದಿಂದ ಅಮೆರಿಕಕ್ಕೆ ಹೋಗಿದ್ದ,
ಎಸೆಕ್ಸ್ ಕೌಂಟಿ ಕೋರ್ಟಿನಲ್ಲಿ ತನ್ನ ಅಪರಾಧದ ಕುರಿತಾಗಿ ವಿಚಾರಣೆ ನಡೆದಾಗ ಹುಸೇನ್, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ; ಹಾಗಾಗಿ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದ. ಪರಿಣಾವಾಗಿ ಆತನೀಗ ಭಾರತಕ್ಕೆ ಗಡೀಪಾರುಗೊಳ್ಳುವಂತಾಗಿದೆ.
-ಉದಯವಾಣಿ
Comments are closed.