ಅಂತರಾಷ್ಟ್ರೀಯ

ಇಂಡೋನೇಷ್ಯಾದ ಸೆಲ್ಪಿ ಮಂಗ ‘ವರ್ಷದ ವ್ಯಕ್ತಿ’

Pinterest LinkedIn Tumblr

ಜಕಾರ್ತ: 2011ರಲ್ಲಿ ಬ್ರಿಟನ್​ನ ಛಾಯಾಗ್ರಾಹಕ ಡೇವಿಡ್ ಸ್ಲೇಟರ್ ಕ್ಯಾಮರಾದ ಸೆಲ್ಪಿಯಲ್ಲಿ ಸೆರೆಯಾಗಿದ್ದ ಅಳಿವಿನಂಚಿನ ಕಪು್ಪ ಕೋತಿ ನರುಟೊವನ್ನು ಪೇಟಾ ಪರ್ಸನ್ ಆಫ್ ದಿ ಇಯರ್ ಎಂದು ಘೋಷಿಸಿದೆ. ಈ ಸೆಲ್ಪಿಯು ಜಾಗತಿಕವಾಗಿ ಚರ್ಚೆಯಾಗಿದ್ದು, ಸೆಲ್ಪಿ ಚಿತ್ರದ ಹಕ್ಕುಸ್ವಾಮ್ಯ ಕುರಿತು ಅಮೆರಿಕದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಹೀಗಾಗಿ ಕೋತಿಗೆ ಸೂಕ್ತ ಮಾನ್ಯತೆ ನೀಡಲು ಹಾಗೂ ಅದನ್ನು ಪ್ರಾಣಿ ಎಂದು ಗುರುತಿಸುವ ಬದಲು ವ್ಯಕ್ತಿಸಮಾನ ಎಂದು ತೋರ್ಪಡಿಸಲು ಪೇಟಾ ನರುಟೊವನ್ನು ‘ವರ್ಷದ ವ್ಯಕ್ತಿ’ ಎಂದು ಆಯ್ಕೆ ಮಾಡಿದೆ. ಇದರಿಂದಾಗಿ ನರುಟೊಗೆ ಸೂಕ್ತ ಮಾನ್ಯತೆ ದೊರೆತಿದ್ದು, ಸೆಲ್ಪಿ ಕಾಪಿರೈಟ್​ನಂತಹ ಪ್ರಕರಣದ ಸಂದರ್ಭ ಅನುಕೂಲವಾಗಲಿದೆ.

2011ರಲ್ಲಿ ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಡೇವಿಡ್ ಸ್ಲಾಟರ್ ಇರಿಸಿದ್ದ ಕ್ಯಾಮರಾದಲ್ಲಿ ಸೆಲ್ಪಿ ತೆಗೆದುಕೊಂಡಿದ್ದ ಕೋತಿ ನರುಟೊ ಪ್ರಸಿದ್ಧಿ ಪಡೆದಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಚಿತ್ರದ ಹಕ್ಕುಗಳು ಕೋತಿಗೆ ಸೇರಬೇಕೆಂದು ಪೇಟಾ ಪ್ರಕರಣ ದಾಖಲಿಸಿತ್ತು. ಆದರೆ ಡೇವಿಡ್ ಸ್ಲೇಟರ್ ಚಿತ್ರಕ್ಕಾಗಿ ತನ್ನ ಕ್ಯಾಮರಾ ಬಳಸಿದ್ದು, ಹೀಗಾಗಿ ಹಕ್ಕುಸ್ವಾಮ್ಯ ತನಗೆ ಸೇರಬೇಕು ಎಂದು ಹೇಳಿದ್ದರು. ನಂತರ ಸೆಪ್ಟೆಂಬರ್​ನಲ್ಲಿ ಪ್ರಕರಣ ಅಂತ್ಯಗೊಂಡು ಕೋತಿಯ ಸೆಲ್ಪಿ ಚಿತ್ರದಿಂದ ಗಳಿಸುವ ಆದಾಯದಲ್ಲಿ ಶೇ. 25ನ್ನು ಇಂಡೋನೇಷ್ಯಾದ ಕೋತಿಗಳ ರಕ್ಷಣಾ ಕಾರ್ಯಕ್ಕೆ ನೀಡುವಂತೆ ಸೂಚಿಸಲಾಗಿತ್ತು

Comments are closed.