ಅಂತರಾಷ್ಟ್ರೀಯ

​ ಪಾಕಿಸ್ತಾನದಲ್ಲಿ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಬರೆದ ಯುವಕನ ವಿರುದ್ಧ ದೇಶದ್ರೋಹದ ಕೇಸ್

Pinterest LinkedIn Tumblr

ಪೆಶಾವರ್: ಮನೆಯ ಗೋಡೆಯ ಮೇಲೆ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಬರೆದ ಪಾಕಿಸ್ತಾನಿ ಯುವಕನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಖೈಬರ್ ಪಖ್ತೂನ್‌ಖ್ವಾ ಪಾಂತ್ಯದ ನಾರಾ ಅಮೇಜಿ ಪ್ರದೇಶದ ನಿವಾಸಿಯಾದ ಸಾಜಿದ್ ಷಾ ಎಂಬ ಯುವಕ ತನ್ನ ಮನೆಯ ಹೊರಗಿನ ಗೋಡೆಯ ಮೇಲೆ ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಬರೆದಿದ್ದು, ಆತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಷ್ಟ್ರೀಯತೆಗೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವು ಸ್ಥಳೀಯ ಪಾಕಿಸ್ತಾನಿಯರು ಗೋಡೆಯ ಮೇಲಿನ ಬರಹಗಳನ್ನು ಅಳಿಸುವಂತೆ ಒತ್ತಾಯಿಸಿದ್ದರು. ಆದರೆ, ಸಾಜಿದ ಮಾತ್ರ ಕ್ಯಾರೆ ಅಂದಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಗೋಡೆಯ ಫೋಟೋ ತೆಗೆದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇ-ಮೇಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.