ಅಂತರಾಷ್ಟ್ರೀಯ

ಇಸ್ಲಾಮಾಬಾದ್’ನಲ್ಲಿ ಹಿಂಸಾಚಾರೂಪ ಪಡೆದುಕೊಂಡ ಪ್ರತಿಭಟನೆ: 6 ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ

Pinterest LinkedIn Tumblr

ಇಸ್ಲಾಮಾಬಾದ್; ಚುನಾವಣಾ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿಜ್ಞಾ ವಿಧಿ ಬದಲಾಯಿಸಿದ್ದ ಕಾನೂನು ಸಚಿವರ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ ಕಳೆದ 3 ವಾರಗಳಿಂದ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಹಿಂಸಾಚಾರೂಪವನ್ನು ಪಡೆದುಕೊಂಡಿದೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯತ್ನ ನಡೆಸಿದಾಗ ಈ ವೇಳೆ ಸಂಘರ್ಷ ಏರ್ಪಟ್ಟಿದೆ. ಪರಿಣಾಮ ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಬಂದ ಭದ್ರತಾ ಪಡೆಗಳ ಮೇಲೆ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿದ್ದು, ಪ್ರತಿಯಾಗಿ ಪೊಲೀಸರು ಅಶ್ರುವಾಯು, ಜಲಫಿರಂಗಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.

ಹಿಂಸಾಚಾರ ಹಿನ್ನಲೆಯಲ್ಲಿ ಸೇನಾ ಮುಖ್ಯಸ್ಥ ಜನರ್ ಖಮರ್ ಬಜ್ವಾ ಅವರು ಪ್ರಧಾನಮಂತ್ರಿ ಅಬ್ಬಾಸಿಯವರೊಂದು ಮಾತುಕತೆ ನಡೆಸಿದ್ದು, ಶಾಂತಿಯುತವಾಗಿ ಸಮಸ್ಯೆ ಪರಿಹರಿಸುವನಂತೆ ಸೂಚಿಸಿದ್ದಾರೆಂದು ಸೇನಾ ವಕ್ತಾರರು ಹೇಳಿದ್ದಾರೆ.

ಹಿಂಸಾಚಾರ ಹಿನ್ನೆಲೆಯಲ್ಲಿ ಇಸ್ಲಾಮಾದ್ ನಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಕಿ ಪಾಕಿಸ್ತಾನ ಸರ್ಕಾರ ಇದೀಗ ಅನಿರ್ದಿಷ್ಟಾವಧಿಗೆ ಸೇನೆಯನ್ನು ನಿಯೋಜಿಸಿದೆ ಎಂದು ವರದಿಗಳಉ ತಿಳಿಸಿವೆ.

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸುದ್ದಿ ಮಾಧ್ಯಮಗಳು ಹಾಗೂ ಕೆಲ ಸಾಮಾಜಿಕ ಜಾಲತಾಣಗಳ ಮೇಲೆ ಪಾಕಿಸ್ತಾನ ಸರ್ಕಾರ ನಿರ್ಬಂಧ ಹೇರಿದೆ. ಹಿಂಸಾಚಾರ ಸುದ್ದಿಯನ್ನು ಪ್ರಸಾರ ಮಾಡದಂತೆ ಪಾಕಿಸ್ತಾನ ಸರ್ಕಾರಿ ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ ಎಂದು ತಿಳಿದುಬಂದಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದವರು ಪ್ರವಾದಿಯವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಪಡೆದುಕೊಳ್ಳು ವಿಧಿಯನ್ನು ಬದಲಾಯಿಸಲು ಚುನಾವಣಾ ಕಾಯ್ದೆಗೆ ತಿದ್ದುಪಡಿತರಲಾಗಿತ್ತು. ಇದನ್ನು ಖಂಡಿಸಿ ತೆಹ್ರೀಕ್-ಐ-ಖತ್ಮ-ಐನಬುವ್ವಾತ್, ತೆಹ್ರೀಕ್-ಐ-ಲಬಬೈಕ್ ಯಾ ರಸೂಲ್ ಅಲ್ಲಾಹ್, ಸುನ್ನಿ ತೆಹ್ರೀಕ್ ಪಾಕಿಸ್ತಾನ್ ಸೇರಿದಂತೆ ಮತ್ತಿತರ ಸಂಘಟನೆಗಳ 2000ಕ್ಕೂ ಹೆಚ್ಚು ಕಾರ್ಯಕರ್ತರು ನ.6 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಈ ತಿದ್ದುಪಡಿಗೆ ಕಾರಣಕರ್ತರಾಗಿರುವ ಕಾನೂನು ಸಚಿವ ಝಹೀದ್ ಹಮೀದ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಅಲ್ಲದೆ, ಪ್ರಕರಣವನ್ನು ಧರ್ಮನಿಂದನೆ ಎಂದು ತಳುಕು ಹಾಕಿದ್ದರು.

Comments are closed.