ಅಂತರಾಷ್ಟ್ರೀಯ

ಆರೇ ತಾಸಿನಲ್ಲಿ ಮನೆ ನಿರ್ಮಾಣ….! ವೆಚ್ಚ ಎಷ್ಟಿರಬಹುದು….?

Pinterest LinkedIn Tumblr

ಮನೆ ಕಟ್ಟಬೇಕು ಎಂದರೆ ಅದಕ್ಕೆ ಪ್ರಶಸ್ತವಾದ ಜಾಗ ಹುಡುಕಬೇಕು. ಹಣ ಕೂಡಿಡಬೇಕು. ನಂತರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಹೀಗೆ ಮನೆ ನಿರ್ಮಾಣ ಮಾಡಲು ಕೆಲವೊಮ್ಮೆ ವರ್ಷಗಳೇ ಹಿಡಿಯುತ್ತವೆ.

ಆದರೆ ಇಟಲಿಯಲ್ಲಿ ಹೊಸ ಮಾದರಿಯ ಮನೆ ನಿರ್ಮಾಣ ಮಾಡಲಾಗುತ್ತಿದೆ. ವಿಶೇಷ ಎಂದರೆ ಇದನ್ನು ಕಟ್ಟಲು ಕೇವಲ ಆರೇ ತಾಸು ಸಾಕು! ಹೌದು, ರೆಂಟಾಲೋ ವಿಡಾಲ್ ಎಂಬುವವರು ಈ ಮಾದರಿಯ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಮಾದರಿಯ ಮನೆಯನ್ನು ಯಾವುದೇ ಮಾದರಿಯ ಜಾಗದಲ್ಲಿ ನಿರ್ಮಾಣ ಮಾಡಬಹುದು. ಇದರ ನಿರ್ವಣಕ್ಕೆ ತಗಲುವ ವೆಚ್ಚ 33 ಸಾವಿರ ಡಾಲರ್ (20 ಲಕ್ಷ ರೂ.) ಇಂಥ ಮನೆ ನಿರ್ಮಾಣ ಮಾಡಲು ಸಿಮೆಂಟ್​ನ ಅಗತ್ಯವಿಲ್ಲ. ಕೇವಲ ಶೀಟ್ ಇತ್ಯಾದಿಗಳನ್ನು ಬಳಸಿ ಮನೆ ಕಟ್ಟಲಾಗುತ್ತದೆ. ಈ ಮನೆ ಸಾಮಾನ್ಯ ಚಂಡಮಾರುತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಗ್ರಾಹಕರು ಈ ಮಾದರಿಯ ಮನೆಯನ್ನು ನಿರ್ಮಾಣ ಮಾಡ ಬಯಸಿದರೆ 60 ದಿನ ಮೊದಲೇ ಕಾಯ್ದಿರಿಸಬೇಕು.

Comments are closed.