ಅಂತರಾಷ್ಟ್ರೀಯ

ಈಜಿಪ್ಟ್‌ ಮಸೀದಿ ಸ್ಫೋಟ: ಸಾವಿನ ಸಂಖ್ಯೆ 155ಕ್ಕೆ ಏರಿಕೆ

Pinterest LinkedIn Tumblr


ಕೈರೋ: ಈಜಿಪ್ಟ್‌ನ ಉತ್ತರ ಭಾಗದ ಸಿನಾಯ್‌ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರ ಬಂದೂಕುಧಾರಿಯೊಬ್ಬ ದಾಳಿ ನಡೆಸಿ, ಬಾಂಬ್‌ ಸ್ಫೋಟಿಸಿದ್ದು, ಕನಿಷ್ಠ 155 ಮಂದಿ ಮೃತಪಟ್ಟಿದ್ದಾರೆ ಎಂದು ಈಜಿಪ್ಟ್‌ನ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಎಲ್‌-ಆರಿಷ್ ಪ್ರಾಂತ್ಯದ ರಾಜಧಾನಿಯಿಂದ 40 ಕಿ.ಮೀ ದೂರದ ರಾವ್ಡಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಅಲ್‌-ಅಹ್ರಮ್‌ ಪತ್ರಿಕೆ ತನ್ನ ವೆಬ್‌ಸೈಟ್‌ನಲ್ಲಿ ಈ ವರದಿ ಮಾಡಿದೆ. ನಾಲ್ಕು ವರ್ಷಗಳಿಂದ ಭಯೋತ್ಪಾದಕರ ದಾಳಿ ಎದುರಿಸುತ್ತಿರುವ ಈಜಿಪ್ಟ್‌ನಲ್ಲಿ ಇಂದು ನಡೆದ ದಾಳಿ ಅತಿ ಭೀಕರ ಎಂದು ಹೇಳಲಾಗಿದೆ.

ದಾಳಿಯ ಸುದ್ದಿ ತಿಳಿದ ಕೂಡಲೇ ಅಧ್ಯಕ್ಷ ಅಬ್ದೆಲ್‌ ಫತಾಹ್‌ ಅಲ್‌ ಸಿಸಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ ಎಂದು ಸರಕಾರಿ ಟಿವಿ ವರದಿ ಮಾಡಿದೆ.

ಉತ್ತರ ಸಿನಾಯ್ ಪ್ರಾಂತ್ಯದಲ್ಲಿ ಈಜಿಪ್ಟ್‌ ಐಸಿಸ್ ಉಗ್ರರ ಜತೆ ಕದನ ನಡೆಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ನೂರಾರು ಪೊಲೀಸರು ಹಾಗೂ ಸೈನಿಕರು ಮೃತಪಟ್ಟಿದ್ದಾರೆ.

Comments are closed.