ಅಂತರಾಷ್ಟ್ರೀಯ

ಮಕ್ಕಳು ಆರು ತಿಂಗಳಿನಿಂದಲೇ ಭಾಷೆ ಕಲೀತಾರೆ ….

Pinterest LinkedIn Tumblr

ಮಗು ಸಾಮಾನ್ಯವಾಗಿ 1.6 ವರ್ಷದಿಂದ 3 ವರ್ಷದವರೆಗೂ ಮಾತನಾಡುವುದನ್ನು ಕಲಿಯುತ್ತದೆ ಎನ್ನಲಾಗಿತ್ತು. ಆದರೆ ಹೊಸ ಸಂಶೋಧನೆ ಪ್ರಕಾರ ಮಗು ಆರು ತಿಂಗಳಿನಿಂದಲೇ ಭಾಷೆ ಕಲಿಯಲು ಪ್ರಾರಂಭಿಸುತ್ತದೆ. 6-9 ತಿಂಗಳಿನ ಮಗು ಮಾತನಾಡಲು ಕಷ್ಟ ಪಡಬಹುದು. ಆದರೆ ಬೇರೆಯವರು ಏನು ಹೇಳುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಲ್ಲದು ಎಂದು ಅಮೆರಿಕದ ಡುರ್ಹಮ್ಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಒಂದೇ ರೀತಿಯ ಪದಗಳ ವ್ಯತ್ಯಾಸ ಜೊತೆಗೆ ‘ಕಾರು ಮತ್ತು ಸುತ್ತಾಡುವುದು’ ಹಾಗೂ ‘ಕಾರು ಮತ್ತು ಜ್ಯೂಸ್’ಗಳ ನಡುವಿನ ವ್ಯತ್ಯಾಸ ಮಕ್ಕಳಿಗೆ ತಿಳಿಯುತ್ತದೆ. ಪದಗ್ರಹಿಕೆಗೆ ಇದು ಬಹಳ ಸಣ್ಣ ವಯಸ್ಸಾದರೂ ಪದಗಳು ಹೇಗೆ ಒಂದಕ್ಕೊಂದು ಸಂಬಂಧಿಸಿವೆ ಎಂದು ತಿಳಿಯುತ್ತದೆ. ಐ ಟ್ರಾ್ಯಕಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಎರಡು ಚಿತ್ರಗಳನ್ನು ಪುಟಾಣಿ ಮಕ್ಕಳಿಗೆ ತೋರಿಸಲಾಯಿತು. ಒಂದು ಚಿತ್ರದಲ್ಲಿ ಕಾಲು ಮತ್ತು ಕೈ ತೋರಿಸಲಾಯಿತು. ಇನ್ನೊಂದರಲ್ಲಿ ಕಾಲು ಮತ್ತು ಕಾರ್ಟೂನ್ ಹಾಲಿನ ಚಿತ್ರ ತೋರಿಸಲಾಯಿತು. ಇದರ ಫಲಿತಾಂಶವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ಮಾತನಾಡುವುದನ್ನು ಗ್ರಹಿಸುತ್ತವೆ ಎಂದು ತಿಳಿದುಬಂದಿದೆ.

Comments are closed.