ಅಂತರಾಷ್ಟ್ರೀಯ

ಆನ್​ಲೈನ್​ನಲ್ಲಿ ವಿಮಾನ ಮಾರಾಟ!

Pinterest LinkedIn Tumblr

ಈಗ ಆನ್​ಲೈನ್ ಯುಗ. ದಿನಬಳಕೆ ವಸ್ತುಗಳಿಂದ ಹಿಡಿದು, ಬೈಕ್, ಕಾರುಗಳು ಆನ್​ಲೈನ್​ನಲ್ಲಿ ಲಭ್ಯ. ಆನ್​ಲೈನ್​ನಲ್ಲಿ ದಿನಬಳಕೆ ವಸ್ತುಗಳ ಜತೆ ವಿಮಾನವನ್ನೂ ಕೊಂಡುಕೊಳ್ಳುವಂತಾದರೆ? ಹೀಗೊಂದು ಅವಕಾಶ ಚೀನಾದಲ್ಲಿ ಕಲ್ಪಿಸಲಾಗಿತ್ತು.

ಜೇಡ್ ಕಾಗೋ ಇಂಟರ್​ನ್ಯಾಷನಲ್ಸ್​ನ 2 ಬೋಯಿಂಗ್ 747 ಜಂಬೋ ವಿಮಾನವನು ಚೀನಾದ ಆನ್​ಲೈನ್ ಶಾಪಿಂಗ್ ತಾಣ ಟೌಬಾವೋದಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಇದನ್ನು ಎಸ್​ಎಫ್ ಏರ್​ಲೈನ್ಸ್ 300 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಜೇಡ್ ಕಾಗೋ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್​ಗಳಿಗೆ ಸಾಲ ವಾಪಸು ಮಾಡಲು ವಿಫಲವಾಗಿತ್ತು. ಹೀಗಾಗಿ ಇದರ ವಿಮಾನವನ್ನು ಹರಾಜಿಗೆ ಇಡಲಾಗಿತ್ತು. 6 ಬಾರಿ ವಿಮಾನ ಹರಾಜಿಗೆ ಇಟ್ಟರೂ ಯಾರೊಬ್ಬರೂ ಅದನ್ನು ಕೊಂಡುಕೊಳ್ಳಲು ಮುಂದೆ ಬಂದಿರಲಿಲ್ಲ. ಹೀಗಾಗಿ ಈ ವಿಮಾನವನ್ನು ಆನ್​ಲೈನ್ ಮೂಲಕ ಮಾರಾಟ ಮಾಡುವಂತೆ ಚೀನಾ ಕೋರ್ಟ್ ಆದೇಶಿಸಿತ್ತು.

Comments are closed.