ಅಂತರಾಷ್ಟ್ರೀಯ

ರಾತ್ರೋರಾತ್ರಿ ಸೇನಾ ದಂಗೆ: ಜಿಂಬಾಬ್ವೆ ತಲ್ಲಣ

Pinterest LinkedIn Tumblr


ಹರಾರೆ: ಜಿಂಬಾಬ್ವೆಯಲ್ಲಿ ರಾತ್ರೋರಾತ್ರಿ ಸೇನಾ ಕ್ಷಿಪ್ರ ಕ್ರಾಂತಿ ನಡೆದಿದ್ದು, ಹಲವು ದಶಕಗಳಿಂದಲೂ ಅಧಿಕಾರ ಅನುಭವಿಸುತ್ತಿದ್ದ ರಾಬರ್ಟ್‌ ಮುಗಾಬೆಯನ್ನು ಸೇನೆ ಗೃಹ ಬಂಧನದಲ್ಲಿರಿಸಿದೆ.

ಸಂಸತ್‌ ಭವನದ ರಸ್ತೆ ಗಳನ್ನು ಮುಚ್ಚಿರುವ ಸೇನಾಪಡೆ, ಮಂಗಳವಾರ ತಡರಾತ್ರಿ ಟಿವಿಯಲ್ಲಿ ಈ ಸುದ್ದಿ ಬಿತ್ತರಿಸಿದೆ. ಆದರೆ ಅಧ್ಯಕ್ಷ ಮುಗಾಬೆ ಸುರಕ್ಷಿತವಾಗಿದ್ದಾರೆ. ಅವರ ಸುತ್ತಲಿರುವ ಅಪರಾಧಿಗಳಷ್ಟೇ ನಮ್ಮ ಟಾರ್ಗೆಟ್‌. ಅಧಿಕಾರವನ್ನು ಸೇನೆ ವಶಪಡಿಸಿ ಕೊಂಡಿಲ್ಲ ಎಂದು ಸೇನೆಯ ಮೇಜರ್‌ ಸಿಬುಸಿಸೊ ಮೊಯೊ ಹೇಳಿದ್ದಾರೆ.

ಸೇನೆ ವರ್ಸಸ್‌ ಸರ್ಕಾರ: 1980ರಲ್ಲಿ ಇಂಗ್ಲೆಂಡ್‌ ದೇಶವನ್ನು ಸ್ವತಂತ್ರಗೊಳಿಸಿದಾಗಿ ನಿಂದಲೂ ಅಧಿಕಾರ ಅನುಭವಿಸುತ್ತಿರುವ 93 ವರ್ಷದ ಮುಗಾಬೆಗೆ ಇದು ಸವಾಲಿನ ಸನ್ನಿ ವೇಶ. ಕೆಲವು ದಿನಗಳಿಂದ ಸೇನೆ ಮತ್ತು ಆಡಳಿತದ ಮಧ್ಯೆ ತಿಕ್ಕಾಟ ತೀವ್ರವಾಗಿತ್ತು. ಉಪಾ ಧ್ಯಕ್ಷ ಎಮ್ಮರ್ಸ್‌ ನಂಗಾಗ್ವಾರನ್ನು ಮುಗಾಬೆ ಅಮಾನತು ಮಾಡಿದಾಗ, ಸೇನಾ ಮುಖ್ಯಸ್ಥ ಕಾನ್‌ಸ್ಟಾಂಟಿನೋ ಚಿವೆಂಗಾ ಬಹಿರಂಗವಾ ಗಿಯೇ ಟೀಕಿಸಿದ್ದರು. ನಂಗಾಗ್ವಾ ಸೇನಾ ವಲಯದಲ್ಲಿ ಜನಪ್ರಿಯವಾಗಿದ್ದು, ಹಿಂದೊಮ್ಮೆ ಮುಗಾಬೆಯ ಆಪ್ತ ಬಳಗದಲ್ಲಿದ್ದವರು.

ಮುಗಾಬೆ ಪತ್ನಿ ಜತೆ ಸೇನೆ ಸಂಘರ್ಷ: ನಂಗಾ ಗ್ವಾರನ್ನು ಅಮಾನತು ಮಾಡಿ, ತನ್ನ ಪತ್ನಿ, 52 ವರ್ಷದ ಗ್ರೇಸ್‌ರನ್ನು ಮುಂದಿನ ಅಧ್ಯಕ್ಷೆ ಯ ನ್ನಾಗಿಸುವ ಬಯಕೆಯನ್ನು ಮುಗಾಬೆ ವ್ಯಕ್ತಪಡಿಸಿದಾಗಲೇ ಸರ್ಕಾರ ಮತ್ತು ಸೇನೆ ಮಧ್ಯೆ ತಿಕ್ಕಾಟ ತಾರಕಕ್ಕೇರಿತ್ತು. ಸೇನೆಗೆ ಕುಮ್ಮಕ್ಕು ನೀಡಿದ್ದು ಕೂಡ ನಂಗಾಗ್ವಾ ಎನ್ನಲಾಗುತ್ತಿದ್ದು, ಇದು ಮುಗಾಬೆ ವಿರುದ್ಧದ ಸೇನಾ ಕಾರ್ಯಾ ಚರಣೆ ಎಂಬುದಕ್ಕಿಂತ ಹೆಚ್ಚಾಗಿ ಮುಗಾಬೆ ಪತ್ನಿ ಗ್ರೇಸ್‌ ಮತ್ತು ಸೇನೆ ನಡುವಿನ ಸಂಘರ್ಷ.

ನಿಷೇಧಾಜ್ಞೆ: ಹಲವು ದೇಶಗಳು ಈಗಾಗಲೇ ಜಿಂಬಾಬ್ವೆಯಲ್ಲಿರುವ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನೊಂದೆಡೆ ವಿಶ್ವಸಂಸ್ಥೆ, ದಕ್ಷಿಣ ಆಫ್ರಿಕಾ ಕೂಡ ತನ್ನ ರಾಯಭಾರಿಗಳನ್ನು ಜಿಂಬಾಬ್ವೆಗೆ ಕಳುಹಿಸಿದೆ. ಅಮೆರಿಕ ರಾಯ ಭಾರ ಕಚೇರಿಯನ್ನು ಮುಚ್ಚಿದ್ದು, ತನ್ನ ನಾಗರಿ ಕರನ್ನು ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದೆ.

ನುಂಗಾಗ್ವಾ ಅಧಿಕಾರಕ್ಕೆ?

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಗ್ರೇಸ್‌ ನಮೀಬಿಯಾಗೆ ತೆರಳಿದ್ದು, ನುಂಗಾಗ್ವಾ ಸ್ವದೇಶಕ್ಕೆ ವಾಪಸಾಗುವ ಸಾಧ್ಯತೆಯಿದೆ. ಕೆಲವು ವಾರಗಳ ಹಿಂದೆ ಅಮಾನತಾದಾಗ ಅವರು ದಕ್ಷಿಣ ಆಫ್ರಿಕಾಗೆ ತೆರಳಿದ್ದರು.

-ಉದಯವಾಣಿ

Comments are closed.