ಅಂತರಾಷ್ಟ್ರೀಯ

ಬರೋಬ್ಬರಿ 220 ಕೋಟಿಗೆ ಬಿಕರಿಯಾದ ನಕ್ಲೇಸ್‌!

Pinterest LinkedIn Tumblr

ಜಿನಿವಾ: ವಜ್ರ ಮತ್ತು ಪಚ್ಚೆಕಲ್ಲುಗಳ ಜತೆಗೆ 163 ಕ್ಯಾರೆಟ್‌ತೂಕದ ಅಪರೂಪದ ಡೈಮಂಡ್‌ ನಕ್ಲೇಸ್‌ ಮಂಗಳವಾರ ರಾತ್ರಿ ನಡೆದ ಹರಾಜಿನಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 220 ಕೋಟಿ ರೂ.ಗೆ ಬಿಕರಿಯಾಗಿದೆ ಎಂದು ಕ್ರಿಸ್ಟೀಸ್‌ಆ್ಯಕ್ಷನ್‌ಹೌಸ್‌ಸಂಸ್ಥೆ ಹೇಳಿದೆ.

ಸ್ವಿಸ್‌ವಜ್ರಾಭರಣ ಮಳಿಗೆ ‘ದಿ ಗ್ರಿಸೊಗೊನೆ’ ವಿನ್ಯಾಸಗೊಳಿಸಿದ ಬೆಂಕಿಪೆಟ್ಟಿಗೆ ಗಾತ್ರದ ‘ಕ್ರಿಯೇಷನ್‌1’ ವಜ್ರವನ್ನು ಒಳಗೊಂಡ ಚಿತ್ತಾಕರ್ಷಕ ನಕ್ಲೇಸ್‌ಅನ್ನು ಕ್ರಿಸ್ಟೀಸ್‌ಆ್ಯಕ್ಷನ್‌ಹೌಸ್‌ನಲ್ಲಿ ಇರಿಸಲಾಗಿತ್ತು. ಆದರೆ ಈ ನಕ್ಲೇಸ್‌ಖರೀದಿಸಿದ ವ್ಯಕ್ತಿಯ ಹೆಸರನ್ನು ಮಾತ್ರ ಸಂಸ್ಥೆ ಬಹಿರಂಗಪಡಿಸಿಲ್ಲ.

ಅಂಗೋಲಾದ ಗಣಿಯಿಂದ ಹೊರ ತೆಗೆಯಲಾದ ಸಂದರ್ಭದಲ್ಲಿ ಈ ವಜ್ರ 7 ಸೆಂಟಿಮೀಟರ್‌ನಷ್ಟು ಉದ್ದವಿತ್ತು. ಇದನ್ನು ಕತ್ತರಿಸಿ ಒಂದು ರೂಪಕ್ಕೆ ತರುವ ಮುನ್ನ ಅದರ ತೂಕ 404 ಕ್ಯಾರಟ್‌ಇತ್ತು ಎಂದು ವಜ್ರಾಭರಣ ಕಂಪನಿ ಲೂಕಾಪ ಹೇಳಿದೆ.

ಇದೇ ಹರಾಜಿನಲ್ಲಿ ‘ಲೆ ಗ್ರಾಂಡ್‌ಮಝರಿನ್‌’ ಎಂಬ 19 ಕ್ಯಾರೆಟ್‌ತೂಕದ ಗುಲಾಬಿ ವರ್ಣದ ವಜ್ರವು 12.5 ಮಿಲಿಯನ್‌ಸ್ವಿಸ್‌ಕ್ರಾಂಕ್ಸ್‌ಗೆ ಮಾರಾಟವಾಗಿದೆ. ಇದನ್ನು 14ನೇ ಲೂಯಿಸ್‌, ನೆಪೋಲಿಯನ್‌ಬೋನಾಪಾರ್ಟ್‌ಸೇರಿದಂತೆ ಇತರೆ ಫ್ರೆಂಚ್‌ಆಡಳಿತಗಾರರು ಧರಿಸಿದ್ದರು. ಕಳೆದ 130 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇದನ್ನು ಹಾರಾಜಿಗೆ ಇಡಲಾಗಿತ್ತು.

Comments are closed.