ಮನೋರಂಜನೆ

ತೈಮೂರ್‌ಗೆ ಕೋಟಿ ಬೆಲೆಯ ಗಿಫ್ಟ್‌ ನೀಡಿದ ಡ್ಯಾಡಿ ಸೈಫ್ !

Pinterest LinkedIn Tumblr

ಹುಟ್ಟಿದಾಗಿನಿಂದ ಸದಾ ಟ್ರೆಂಡ್‌ನಲ್ಲಿರುವ ಹೆಸರೆಂದರೆ ತೈಮೂರ್‌ ಅಲಿಖಾನ್‌. ಯಾವ ಸೆಲೆಬ್ರಿಟಿ ಕಿಡ್‌ಗೆ ಇರದ ಜನಪ್ರಿಯತೆ ಈ ಕಿಡ್ ಸೆಲೆಬ್ರಿಟಿಗಿದೆ. ಪಾಪಾರಾಜಿಗಳ ಸೆಲೆಬ್ರಿಟಿಗಳ ಹಿಂದೆ ಬೀಳುವಂತೆ ತೈಮೂರ್‌ಹಿಂದೆ ಬೀಳುತ್ತಿದ್ದಾರೆ.

ತೈಮೂರ್‌ನಕ್ಕರೂ, ಅತ್ತರೂ ಸೋಷಿಯಲ್‌ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾನೆ. ಈ ಡಿಸೆಂಬರ್‌ಗೆ ತೈಮೂರ್ ಒಂದು ವರ್ಷ ತುಂಬುತ್ತಿದ್ದು ಹುಟ್ಟುಹಬ್ಬದ ಆಚರಣೆ ಬಗ್ಗೆ ಬಿಟೌನ್‌ನಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಹರಿದಾಡುತ್ತಿದೆ.

ರಾಯಲ್‌ಕುಟುಂಬದಲ್ಲಿ ಹುಟ್ಟಿರುವ ತೈಮೂರ್‌ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಅಪ್ಪ ಸೈಫ್ ಅಲಿಖಾನ್ ತನ್ನ ಮುದ್ದಿನ ಕಿರಿಯ ಮಗನಿಗೆ ಈಗಾಗಲೇ ಗಿಫ್ಟ್‌ಕೂಡ ಕೊಂಡುಕೊಂಡಿದ್ದಾರೆ.

ತೈಮೂರ್‌ಪುಟಾಣಿಗೆ ಸೈಫ್ ಜೀಪ್ ಗ್ರಾಂಡ್ ಚೆರೋಕೀ ಎಸ್‌ಆರ್‌ಟಿ ಗಿಫ್ಟ್‌ನೀಡುತ್ತಿದ್ದಾರೆ. 1.30 ಕೋಟಿ ಬೆಲೆಬಾಳುವ ಚೆರ್ರಿ ಬಣ್ಣದ ಬೇಬಿ ಸೀಟ್‌ಇರುವ ಜೀಪ್ ಗಿಫ್ಟ್‌ನೀಡುತ್ತಿದ್ದಾರೆ. ಸೇಫ್ಟಿ ದೃಷ್ಟಿಯಿಂದಲೂ ತೈಮೂರ್‌ಈ ಜೀಪ್‌ಬೆಸ್ಟ್‌ಎಂದು ಸೈಫ್‌ಹೇಳಿದ್ದಾರೆ.

ಕರಿನ ಮತ್ತು ಸೈಫ್‌ತಮ್ಮ ವೃತ್ತಿ ಬದುಕಿನಲ್ಲಿ ಸಕತ್‌ಬ್ಯುಸಿಯಾಗಿದ್ದು ತಮ್ಮ ಮುದ್ದಿನ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಪ್ಲಾನ್‌ಮಾಡಿದ್ದಾರೆ ಎಂದು ಬಾಲಿವುಡ್‌ಮೂಲಗಳು ತಿಳಿಸಿವೆ.

Comments are closed.