ಅಂತರಾಷ್ಟ್ರೀಯ

ಯೋಗವನ್ನು ಕ್ರೀಡೆಯಾಗಿ ಘೋಷಿಸಿದ ಸೌದಿ ಅರೇಬಿಯಾ

Pinterest LinkedIn Tumblr


ರಿಯಾದ್: ನಮ್ಮ ದೇಶದಲ್ಲಿ ಯೋಗ ಹೇಳಿಕೊಡೋ ಮುಸ್ಲಿಮ್ ಯುವತಿ ವಿರುದ್ಧ ಫತ್ವಾ ಹೊರಡಿಸಿ, ಕೊಲೆ ಬೆದರಿಕೆ ಹಾಕಿದರೆ, ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಯೋಗವನ್ನು ಕ್ರೀಡೆಯನ್ನಾಗಿ ಪರಗಿಣಿಸಿ, ಮಂಗಳವಾರ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ಘೋಷಿಸಿದೆ.

ವೈಯಕ್ತಿಕವಾಗಿ ಯೋಗವನ್ನು ಅಭ್ಯಾಸ ಮಾಡಲು ಇಚ್ಛಿಸುವವರು ಸಂಬಂಧಿಸಿದ ಸಂಸ್ಥೆಯಿಂದ ಪರವಾನಗಿ ಪಡೆಯಬೇಕು. ನೌಫ್ ಮಾರ್ವೈ ಸೌದಿಯ ಮೊದಲ ಪ್ರಮಾಣೀಕೃತ ಯೋಗ ತರಬೇತುದಾರರಾಗಿದ್ದು, ಸೌದಿ ಅರೇಬಿಯಾ ತೆಗೆದುಕೊಂಡ ಈ ನಿರ್ಧಾರಕ್ಕೆ ಇವರೇ ಕಾರಣ.

‘ವ್ಯಕ್ತಿಯ ಧರ್ಮಕ್ಕೂ ಹಾಗೂ ಯೋಗಾಭ್ಯಾಸಕ್ಕೂ ಯಾವುದೇ ಸಂಬಂಧವಿಲ್ಲವೆನ್ನುತ್ತಾರೆ,’ ಈ ಮಾರ್ವೈ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಾಬಾ ರಾಮ್‌ದೇವ್ ಅವರೊಂದಿಗೆ ವೇದಿಕೆ ಹಂಚಿಕೊಂಡ ರಾಂಚಿ ಮೂಲದ ರಾಫಿಯಾ ಎಂಬ ಯುವತಿ ವಿರುದ್ಧ ಜಾರ್ಖಂಡ್ ಧಾರ್ಮಿಕ ಮುಖಂಡರು ಹರಿಹಾಯ್ದಿದ್ದರು.

ಈ ಮುಸ್ಲಿಂ ಯುವತಿ ವಿರುದ್ಧ ಫತ್ವಾ ಹೊರಡಿಸಿದ್ದು, ಮಾಧ್ಯಮದಲ್ಲಿಯೂ ದೊಡ್ಡ ಸುದ್ದಿಯಾಗಿತ್ತು. ಇದಾದ ಎರಡೇ ದಿನಗಳಲ್ಲಿ ಸೌದಿ ಅರೇಬಿಯಾ ಯೋಗಕ್ಕೆ ಮಾನ್ಯತೆ ನೀಡಿರುವುದು ಆಶ್ಚರ್ಯ ತಂದಿದೆ.

ಯೋಗಾಭ್ಯಾಸ ಮಾಡುತ್ತಿರುವುದಕ್ಕೆ ಮತ್ತು ಅದನ್ನು ಪ್ರಚಾರ ಮಾಡುತ್ತಿರುವುದಕ್ಕೆ, ಮೂಲಭೂತವಾದಿಗಳು ಈಕೆ ಮೇಲೆ ದೌರ್ಜನ್ಯವೆಸಗಿದ್ದು, ಮನೆ ಮೇಲೆ ಕಲ್ಲೆಸೆದಿದ್ದರು. ಆಕೆಯನ್ನು ಮುಸ್ಲಿಂ ಎಂದೇ ಪರಿಗಣಿಸಲು ಧಾರ್ಮಿಕ ಸಂಸ್ಥೆಗಳಲ್ಲಿ ವಿರೋಧವಾಗಿದ್ದವು.

Comments are closed.