ಮೆಲ್ಬೋರ್ನ್: ಆಸ್ಟ್ರೇಲಿಯಾದ ಕರಾವಳಿ ರಾಜಧಾನಿ ಎಂದೇ ಪ್ರಸಿದ್ಧವಾದ ಮೆಲ್ಬೋರ್ನ್ನ ಕ್ರೋಯ್ಡೆನ್ ಹಿಲ್ಸ್ನಲ್ಲಿ ಕಳೆದ ಸೋಮವಾರದಂದು ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ಲ್ಯಾಪ್ಟಾಪ್, ನಗದು ಸೇರಿ ಎಂಟು ತಿಂಗಳ ನಾಯಿ ಮರಿಯನ್ನೂ ಹೊತ್ತೊಯ್ದಿದ್ದರು. ಆದರೆ ಘಟನೆ ನಡೆದು ಮೂರು ದಿನಕ್ಕೆ ನಾಯಿ ಸದ್ದಿಲ್ಲದೇ ಹಿಂತಿರುಗಿದೆ.
ಹೌದು! ಸೋಮವಾರದಂದು ಮನೆಯಲ್ಲಿದ್ದ ಆಭರಣಗಳ ಜತೆಗೆ ಎಂಟು ತಿಂಗಳ ಲಾಬ್ರೋಡಾರ್ ನಾಯಿ ಮರಿಯನ್ನೂ ಸಹ ಹೊತ್ತೊಯ್ದಿದ್ದರು. ಆದರೆ ಕಳ್ಳತನ ನಡೆದ ಮೂರು ದಿನಗಳ ಬಳಿಕ ಸಶಾ ಮರಳಿದ್ದಾಳೆ. ಇದು ಎಲ್ಲರಿಗೂ ಸಂತಸವನ್ನುಂಟು ಮಾಡಿದೆ. ‘ನಾವು ಕಳ್ಳತವಾದ ವಸ್ತುಗಳ ಬಗ್ಗೆ ತಲೆಕೆಸಿಕೊಂಡಿಲ್ಲ. ಆದರೆ ನಾಯಿ ಮರಿಯಿಲ್ಲದೇ ಒಂದು ದಿನವೂ ಕೂರಲಾಗುತ್ತಿರಲಿಲ್ಲ ಎಂದು ಮನೆಯ ಮಾಲಿಕ ರಯಾನ್ ಹೂಡ್ ಹೇಳಿದ್ದಾರೆ.
ಆದರೆ ವಿಕ್ಟೋರಿಯಾ ಪೊಲೀಸರಿಗೆ ನಾಯಿ ಹಿಂತಿರುಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ನಾಯಿ ಮರಿ ಅವರ ಬಳಿಯಿರುವುದರಿಂದ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಸಂಭವವೇ ಹೆಚ್ಚು. ಹೀಗಾಗಿ ಅವರು ನಾಯಿಯನ್ನು ಮನೆಗೆ ಮರಳಿಸಿರಬಹುದು ಎನ್ನಲಾಗಿದೆ.