ಅಂತರಾಷ್ಟ್ರೀಯ

ಕನ್ನ ಹಾಕಲು ಹೋಗಿ ಕಿಟಕಿಯಲ್ಲಿ ಸಿಲುಕಿದ ಕಳ್ಳ!

Pinterest LinkedIn Tumblr


ಬರ್ಮಿಂಗ್‌ಹ್ಯಾಮ್‌: ಅತ್ಯಂತ ವಿರಳ ಪ್ರಸಂಗವೊಂದರಲ್ಲಿ ಬರ್ಮಿಂಗ್‌ ಹ್ಯಾಮ್‌ನ ಪೊಲೀಸರು ಕಿಟಿಕಿಯಲ್ಲಿ ಸಿಲುಕಿಕೊಂಡಿದ್ದ ಕಳ್ಳನನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಬರ್ಮಿಂಗ್‌ಹ್ಯಾಮ್‌ನ ರೆಸ್ಟೋರೆಂಟ್‌ಗೆ ಕನ್ನ ಹಾಕಲು 45 ವರ್ಷದ ವ್ಯಕ್ತಿ ವೆಂಟಿಲೇಟರ್‌ ಮೂಲಕ ಹತ್ತಿ ಒಳ ಸೇರಲು ಯತ್ನಿಸಿದ್ದಾನೆ. ಆದರೆ ಆತನ ಹೊಟ್ಟೆಯ ಭಾಗ ವೆಂಟಿಲೇಟರ್‌ ಸಂದಿಯೊಳಗೆ ಹೋಗಲಿಲ್ಲ. ಹೀಗಾಗಿ ಸುಮಾರು ಏಳು ಗಂಟೆಗಳ ಕಾಲ ಅಲ್ಲೇ ಸಿಲುಕಿಕೊಂಡು ಕಾಪಾಡುವಂತೆ ಬೊಬ್ಬೆಯಿಟ್ಟಿದ್ದಾನೆ.
ಈತನ ಪರಿಸ್ಥಿತಿಯನ್ನು ಕಂಡ ದಾರಿಹೋಕ ಕೂಡಲೇ ವೆಸ್ಟ್‌ ಮಿಡ್ಲ್‌ಲ್ಯಾಂಡ್ ಪೊಲೀಸರಿಗೆ ಕರೆ ಮಾಡಿದ್ದಾನೆ. ರಕ್ಷಣೆಗೆ ಬಂದ ಪೊಲೀಸರು ಈತನ ಪರಿಸ್ಥಿತಿ ಕಂಡು ಏನೂ ತೋಚದಂತಾಗಿದೆ. ನಂತರ ಅಗ್ನಿಶಾಮಕ ದಳದ ಸಹಾಯದಿಂದ ಈತನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಆತನನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಆದರೆ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ ವೆಸ್ಟ್‌ ಮಿಡ್ಲ್‌ಲ್ಯಾಂಡ್ ಪೊಲೀಸರ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೆಲವರ ಪ್ರತಿಕ್ರಿಯೆ ಇಲ್ಲಿದೆ.

Comments are closed.