ಅಂತರಾಷ್ಟ್ರೀಯ

ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ಅಡ್ಡಿ

Pinterest LinkedIn Tumblr


ಬೀಜಿಂಗ್: ಪಠಾಣ್‌ಕೋಟ್‌ ಉಗ್ರ ದಾಳಿಯ ರೂವಾರಿ, ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಒಮ್ಮತವಿಲ್ಲದ ಕಾರಣ ಆ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಚೀನಾ ಹೇಳಿದೆ.

ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕು ಎಂದು ಭಾರತ ಸಲ್ಲಿಸಿದ್ದ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿರುವ ಚೀನಾ ಪದೇಪದೆ ಅಡ್ಡಪಿಡಿಸುತ್ತಿದೆ.

ಭಾರತ ಸಲ್ಲಿಸಿದ್ದ ಪ್ರಸ್ತಾವನೆಗೆ ಚೀನಾ ಮುಂದಿಟ್ಟಿದ್ದ ಆಕ್ಷೇಪಣೆಯ ಅವಧಿ ಕಳೆದ ವರ್ಷವೇ ಅಂತ್ಯಗೊಂಡಿದೆ. ಆದರೆ ಜನವರಿ ತಿಂಗಳಲ್ಲಿ ಮಸೂದ್ ಅಜರ್ ನ್ನು ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಅಮೆರಿಕ ಮುಂದಿಟ್ಟಿದ್ದ ಪ್ರಸ್ತಾವನೆಗೂ ಚೀನಾ ಅಡ್ಡಗಾಲು ಹಾಕಿತ್ತು. ಚೀನಾದಿಂದ ಉಂಟಾಗಿದ್ದ ತಾಂತ್ರಿಕ ತಡೆ ಆಗಸ್ಟ್ ವರೆಗೂ ಅಸ್ತಿತ್ವದಲ್ಲಿತ್ತು. ಇಂದು ಚೀನಾದ ತಾಂತ್ರಿಕ ತಡೆ ಅಂತ್ಯಗೊಂಡಿದೆ. ಆದರೂ ಒಮ್ಮತವಿಲ್ಲದ ಕಾರಣ ಭಾರತದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಅಜರ್‌ನನ್ನು ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಯತ್ನಕ್ಕೆ 2008ರಲ್ಲೂ ತಡೆಯೊಡ್ಡಿದ್ದ ಚೀನಾ, ಕೆಲ ದಿನಗಳ ಹಿಂದೆಯೂ ತಾಂತ್ರಿಕ ಕಾರಣ ನೀಡಿ ಅಡ್ಡಿಪಡಿಸಿತ್ತು.

Comments are closed.