ಅಂತರಾಷ್ಟ್ರೀಯ

ಯುದ್ಧಕ್ಕೆ ಸಿದ್ಧವಾಗಿರಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ

Pinterest LinkedIn Tumblr


ಬೀಜಿಂಗ್: ಚೀನಾ ಅಧ್ಯಕ್ಷರಾಗಿ ಐದು ವರ್ಷಗಳ ಎರಡನೇ ಅವಧಿ ಆರಂಭಿಸಿರುವ ಕ್ಸಿ ಜಿನ್ ಪಿಂಗ್ ಅವರು, ದೇಶದ 2.3 ಮಿಲಿಯನ್ ಸಂಖ್ಯೆಯ, ವಿಶ್ವದ ಅತಿ ದೊಡ್ಡ ಸೇನೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಮತ್ತು ಆಡಳಿತ ಕಮ್ಯುನಿಸ್ಟ್ ಪಕ್ಷಕ್ಕೆ ಸಂಪೂರ್ಣ ನಿಷ್ಠರಾಗಿರಿವಂತೆ ಸೂಚಿಸಿದ್ದಾರೆ.

ಗುರುವಾರ ಹಿರಿಯ ಸೇನಾಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ 67 ವರ್ಷದ ಕ್ಸಿ ಜಿನ್ ಪಿಂಗ್ ಅವರು ತಮ್ಮ ಎರಡನೇ ಅವಧಿ ಆರಂಭಿಸಿದ್ದು, ಯುದ್ಧಗಳನ್ನು ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಎರಡನೆ ಬಾರಿಗೆ ಐದು ವರ್ಷಗಳ ಅವಧಿಗೆ ಮರುನೇಮಕಗೊಳಿಸುವ ಪ್ರಸ್ತಾಪಕ್ಕೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಮಂಗಳವಾರ ಅನುಮೋದನೆ ನೀಡಿದೆ ಹಾಗೂ ಅವರ ಆಯ್ಕೆಯ ನಾಯಕರ ತಂಡವೊಂದನ್ನೂ ನೇಮಿಸಿದೆ.

ಕ್ಸಿ ಜಿನ್ ಪಿಂಗ್ ಅವರ ರಾಜಕೀಯ ಸಿದ್ಧಾಂತವೊಂದನ್ನು ಕಮ್ಯುನಿಸ್ಟ್ ಪಕ್ಷದ ಸಂವಿಧಾನದಲ್ಲಿ ಅವರ ಹೆಸರಿನಲ್ಲೇ ಸೇರಿಸಲಾಗಿದ್ದು, ಇಂದರಿಂದಾಗಿ ಜಿನ್ ಪಿಂಗ್ ಚೀನಾದ ಐತಿಹಾಸಿಕ ನಾಯಕರಾದ ಮಾವೊ ಝೆಡಾಂಗ್ ಮತ್ತು ಡೆಂಗ್ ಕ್ಸಿಯಾವೊಪಿಂಗ್ ರ ಸಾಲಿಗೆ ಸೇರಿದಂತಾಗಿದೆ.

Comments are closed.