ರಾಷ್ಟ್ರೀಯ

ಪ್ರೀ ಬುಕ್ಕಿಂಗ್‌: ಅರ್ಧ ತಾಸೊಳಗೆ Apple iPhone X sold out

Pinterest LinkedIn Tumblr


ಹೊಸದಿಲ್ಲಿ : ಅತ್ಯಂತ ದುಬಾರಿ ಐಫೋನ್‌ ಎಕ್ಸ್‌ ಗೆ ಭಾರತದಲ್ಲಿ ಅಂಥ ದೊಡ್ಡ ಬೇಡಿಕೆ ಇರಲಾರದು ಎಂದು ಭಾವಿಸಿಕೊಂಡಿದ್ದವರಿಗೆ ಈಗ ಅಚ್ಚರಿಯೋ ಆಚ್ಚರಿ.

ಆ್ಯಪ್ಪಲ್‌ ಕಂಪೆನಿಯ ಹೊಚ್ಚ ಹೊಸ ಐಫೋನ್‌ ಎಕ್ಸ್‌ ಮಾದರಿಯ ಪೋನನ್ನು ಭಾರತ ಸಹಿತ 55 ದೇಶಗಳಲ್ಲಿ ಸಿಗುವಂತೆ ಮಾಡಲಾಗಿತ್ತು.

ಭಾರತದಲ್ಲಿ ಇಂದು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಐ ಫೋನ್‌ ಎಕ್ಸ್‌ ಪ್ರೀ ಆರ್ಡರ್‌ ಬುಕ್ಕಿಂಗ್‌ ಆರಂಭಗೊಂಡಿತ್ತು. ಇದೇ ವೇಳೆ ಕ್ಯಾಲಿಫೋರ್ನಿಯ ಕ್ಯುಪರ್ಟಿನೋದಲ್ಲೂ ಪ್ರೀ ಆರ್ಡರ್‌ ತೆರೆಯಲಾಗಿತ್ತು.

ಫ್ಲಿಪ್‌ ಕಾರ್ಟ್‌ ಮತ್ತು ಅನಜಾನ್‌ ನಲ್ಲಿ ಪ್ರೀ ಬುಕ್ಕಿಂಗ್‌ ಆರಂಭಗೊಂಡ ಅರ್ಧ ತಾಸಿಗೂ ಮುನ್ನವೇ ಐಫೋನ್‌ ಎಕ್ಸ್‌ ಸ್ಟಾಕ್‌ ಮುಗಿದು ಹೋಯಿತು.

ಒಂದೊಮ್ಮೆ ನೀವು ಐಫೋನ್‌ ಎಕ್ಸ್‌ ಖರೀದಿಯಲ್ಲಿ ಆಸಕ್ತಿ ಹೊಂದಿರುವವರಾದರೆ ನೀವು ನಿಮ್ಮ ಇ-ಮೇಲ್‌ ಐಡಿಯನ್ನು ‘ನೋಟಿಫೈ ಮಿ’ ಟ್ಯಾಬ್‌ನಲ್ಲಿ ನಮೂದಿಸಬಹುದು; ಮುಂದಿನ ಬಾರಿ ಐಫೋನ್‌ ಎಕ್ಸ್‌ ಲಭ್ಯವಾದಾಗ ನೀವು ನೊಟಿಫೀಕೇಶನ್‌ ಪಡೆಯುವಿರಿ.

ಐ ಫೋನ್‌ ಎಕ್ಸ್‌ 64ಜಿಬಿ ಮತ್ತು 256 ಜಿಬಿ ಮಾಡೆಲ್‌ಗ‌ಳಲ್ಲಿ ಸಿಲ್ವರ್‌ ಮತ್ತು ಸ್ಪೇಸ್‌ ಗ್ರೇ ಬಣ್ಣದಲ್ಲಿ ಲಭ್ಯವಿದೆ; ನವೆಂಬರ್‌ 3ರಿಂದ ಭಾರತದಲ್ಲಿ 89,000 ರೂ.ಗಳಿಂದ ತೊಡಗಿ ಲಭ್ಯವಿರುತ್ತದೆ.

-ಉದಯವಾಣಿ

Comments are closed.