ಅಂತರಾಷ್ಟ್ರೀಯ

ಭಾರತೀಯ ಮೂಲದ ದಂಪತಿಗೆ ಅಮೆರಿಕ ಪ್ರಶಸ್ತಿ

Pinterest LinkedIn Tumblr


ವಾಷಿಂಗ್ಟನ್‌: ಏಡ್ಸ್‌ ಸಂಶೋಧನೆಯಲ್ಲಿ ಮಹತ್ವದ ಸಾಧನೆಗೈದ ಭಾರತೀಯ ಮೂಲದ ದಂಪತಿಗೆ ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿ ಲಭ್ಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಸಲೀಮ್‌ ಅಬ್ದುಲ್‌ ಕರೀಮ್‌ ಮತ್ತು ಖುರೈಶಾ ಅಬ್ದುಲ್‌ ಕರೀಮ್‌ಗೆ ಅಮೆರಿಕದ ಬಾಲ್ಟಿಮೋರ್‌ನ ಇನ್‌
ಸ್ಟಿಟ್ಯೂಟ್‌ ಫಾರ್‌ ಹ್ಯೂಮನ್‌ ವಿರಾಲಜಿ (ಐಎಚ್‌ವಿ) ಪ್ರಶಸ್ತಿ ನೀಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಕ್ಯಾಪ್ರಿಸಾ ಎಂಬ ಸಂಸ್ಥೆಯ ನೇತೃತ್ವವನ್ನು ದಂಪತಿ ವಹಿಸಿದ್ದು, ಎಚ್‌ಐವಿ ದ್ವಿಗುಣಗೊಳ್ಳುವುದನ್ನು ತಡೆಯುವ ಆ್ಯಂಟಿರೆಟ್ರೋವೈರಲ್‌ ಗಳನ್ನು ಇವರು ಮೊದಲ ಬಾರಿಗೆ ಪರಿಚಯಿಸಿದ್ದರು. ಇದು 2010ರಲ್ಲಿ ನಡೆದ ಅತ್ಯಂತ ಮಹತ್ವದ ಸಂಶೋಧನೆ ಎಂದು ಮೆಚ್ಚುಗೆ ವ್ಯಕ್ತವಾಗಿತ್ತು.

-ಉದಯವಾಣಿ

Comments are closed.