ಅಂತರಾಷ್ಟ್ರೀಯ

ಥಾಯ್ಲೆಂಡಲ್ಲಿ ಸಿಗರೇಟ್‌ ಸೇದಿದರೆ ಜೋಕೆ!

Pinterest LinkedIn Tumblr


ಥಾಯ್ಲೆಂಡ್‌ಗೆ ಪ್ರವಾಸ ಹೋಗುವ ಯೋಚನೆಯೇ ನಾದರೂ ನಿಮಗಿದೆಯಾ? ಹಾಗಾದರೆ ಇಲ್ಲಿ ಕೇಳಿ. ಯಾವುದೇ ಕಾರಣಕ್ಕೂ ಸಮುದ್ರ ತೀರದಲ್ಲಿ ಸಿಗರೇಟ್‌ ಹೊತ್ತಿಸಬೇಡಿ. ಹಾಗೇನಾದರೂ ನೀವು ಮಾಡಿದ್ದೇ ಆದಲ್ಲಿ 2 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ, 1 ವರ್ಷ ಥಾಯ್ಲೆಂಡ್‌ನ‌ಲ್ಲಿ ಕಂಬಿ ಎಣಿಸಿದ ಅನುಭವ ನಿಮಗಾಗುವುದು ಗ್ಯಾರಂಟಿ. ಅಂದ ಹಾಗೆ ಈ ನೀತಿ ನವೆಂಬರ್‌ನಿಂದ ಜಾರಿಯಾಗಲಿದೆ. ಈ ರೀತಿಯ ಕಠಿಣ ಕಾನೂನನ್ನು ತರಲು ಕಾರಣ ಸುಂದರ ಸಮುದ್ರ ತೀರಗಳಲ್ಲಿ ಸಿಗರೇಟ್‌ ತುಂಡುಗಳು ರಾಶಿ ರಾಶಿ ಸಿಕ್ಕಿರುವುದು.

ಪ್ಯಟಾಂಗ್‌ ಸಮುದ್ರ ತೀರದಲ್ಲಿ 2.5 ಕಿ.ಮೀ ಉದ್ದದ ತೀರವನ್ನು ಸ್ವತ್ಛಗೊಳಿಸಿದಾಗ 1,40,000
ಸಿಗರೇಟ್‌ ತುಂಡುಗಳು ಸಿಕ್ಕವಂತೆ. ಇದನ್ನು ಹೀಗೇ ಬಿಟ್ಟರೆ ಮರಳು ಕಣದ ಬದಲಿಗೆ ಸಿಗರೇಟ್‌ ರಾಶಿಯೇ ಸಮುದ್ರ ತೀರದ ತುಂಬಾ ಕಾಣಲಿದೆ ಎಂದು ಅಂದಾಜಿಸಿದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.ಅಲ್ಲದೇ, ನವೆಂಬರ್‌ನಿಂದ ಥಾಯ್ಲೆಂಡ್‌ನ‌ಲ್ಲಿ ಪ್ರವಾಸೋದ್ಯಮ ಋತು ಆರಂಭವಾಗುತ್ತದೆ. ಆದ್ದರಿಂದ ಈ ನಿಯಮ ನವೆಂಬರ್‌ನಿಂದ ಜಾರಿ!

-ಉದಯವಾಣಿ

Comments are closed.