ರಾಷ್ಟ್ರೀಯ

RSS ನಾಯಕನ ಹತ್ಯೆಗೆ ಖಂಡನೆ, ಹಿಂಸೆ ಸಹಿಸಲ್ಲ ಎಂದ ರಾಹುಲ್ ಗಾಂಧಿ!

Pinterest LinkedIn Tumblr


ನವದೆಹಲಿ: ಆರ್ ಎಸ್ ಎಸ್ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಪಂಜಾಬ್ ನ ಲುಧಿಯಾನದಲ್ಲಿ ಆರೆಸ್ಸೆಸ್ ನಾಯಕ ರವೀಂದರ್ ಗೋಸೈನ್(60ವರ್ಷ) ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆಯನ್ನು ಬಲವಾಗಿ ಖಂಡಿಸಿದ್ದು, ಹಿಂಸೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆರ್ ಎಸ್ಎಸ್ ಮುಖಂಡ ಗೋಸೈನ್ ಹತ್ಯೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳೆಯರ ಸೇರ್ಪಡೆಗೆ ಅವಕಾಶ ಇಲ್ಲ, ಆರ್ ಎಸ್ ಎಸ್ ನಲ್ಲಿ ಚಡ್ಡಿ ಧರಿಸಿದ್ದ ಮಹಿಳೆಯರನ್ನು ನೋಡಿದ್ದೀರಾ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿ ವಿವಾದಕ್ಕೊಳಗಾದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

-ಉದಯವಾಣಿ

Comments are closed.