ಅಂತರಾಷ್ಟ್ರೀಯ

ಅಬ್ಬಾ….ಮೂರೂವರೆ ಗಂಟೆ ಭಾಷಣ ಮಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌

Pinterest LinkedIn Tumblr


ಬೀಜಿಂಗ್‌: ಚೀನಾ ಆಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅತ್ಯಂತ ಸುಧೀರ್ಘ ಭಾಷಣ ಮಾಡಿದ್ದಾರೆ.

ಅದು ಒಂದಲ್ಲ ಎರಡಲ್ಲ, ಮೂರುವರೆ ಗಂಟೆಗಳ ಸುದೀರ್ಘ ಭಾಷಣ. ಕಮ್ಯುನಿಸ್ಟ್‌ ಪಾರ್ಟಿ ಕಾಂಗ್ರೆಸ್‌ನ ಸಮಾವೇಶದಲ್ಲಿ ಕ್ಸಿ ಜಿನ್‌ಪಿಂಗ್‌ ಈ ಭಾಷಣ ಮಾಡಿದರು.

ಚೀನಾ ಮಾಧ್ಯಮಗಳಲ್ಲಿ ಈ ಭಾಷಣವನ್ನು ಪ್ರಸಾರ ಮಾಡಲಾಯಿತು. ಬಹುತೇಕ ಎಲ್ಲರೂ ಈ ಭಾಷಣವನ್ನು ಆಲಿಸಿದರು.

ಗ್ರೇಟ್‌ ಹಾಲ್‌ ಆಫ್‌ ದ ಪೀಪಲ್‌ ಸಭಾಂಗಣದಲ್ಲಿ ಸುಮಾರು 2,300 ಅತಿಥಿಗಳ ಸಮ್ಮುಖದಲ್ಲಿ ಕ್ಸಿ ಜಿನ್‌ಪಿಂಗ್ ಭಾಷಣ ಮಾಡಿದರು. ಮಧ್ಯೆ ಮಧ್ಯೆ ಕೆಲವೊಮ್ಮೆ ಲಘು ಪಾನೀಯ ಸೇವಿಸಿದ್ದು ಬಿಟ್ಟರೆ ಎಲ್ಲೂ ವಿಶ್ರಾಂತಿ ತೆಗೆದುಕೊಳ್ಳದೇ ಮೂರುವರೆ ಗಂಟೆ ಭಾಷಣ ಮಾಡಿದರು.

ಭಾಷಣದುದ್ದಕ್ಕೂ ಕ್ಸಿ ಜಿನ್‌ಪಿಂಗ್‌, ಜಾಗತಿಕ ಮಟ್ಟದಲ್ಲಿ ಚೀನಾ ಬೆಳೆಯುತ್ತಿರುವ ರೀತಿ, ಮುಂದಿನ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು.

ಚೀನಾದ ಮಾಜಿ ಅಧ್ಯಕ್ಷ 91 ವರ್ಷದ ಜಿಯಾಂಗ್‌ ಜೆಮಿನ್‌ ಅವರು ಅತಿಥಿ ಗಣ್ಯರ ಸಾಲಿನಲ್ಲಿ ಆಸೀನರಾಗಿದ್ದರು.

ಚೀನಾ ಡ್ರೀಮ್‌ ಸ್ಲೋಗನ್‌ನೊಂದಿಗೆ ಭಾಷಣ ಆರಂಭಿಸಿ, ದೇಶದ ಕನಸುಗಳನ್ನು ನಾಗರಿಕರ ಮುಂದಿಡುವ ಮೂಲಕ ಭಾಷಣಕ್ಕೆ ಮಂಗಳ ಹಾಡಿದರು.

ಭಾಷಣ ಮುಗಿಯುತ್ತಿದ್ದಂತೆ ಅತಿಥಿಗಳೆಲ್ಲರೂ ಎದ್ದು ಕರತಾಡನ ಮಾಡಿದರು, ಆ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್‌ ತಲೆ ಬಾಗಿ ವಂದಿಸಿದರು.

2012ರಲ್ಲಿ ಹೂ ಜಿಂಟಾವೊ ಒಂದೂವರೆ ಗಂಟೆಗಳ ಕಾಲ ಭಾಷಣ ಮಾಡಿದರು.

Comments are closed.