ರಾಷ್ಟ್ರೀಯ

ತಾಜ್‌ಮಹಲ್‌ ಶಿವ ದೇಗುಲ: ವಿವಾದಿತ ಹೇಳಿಕೆ ನೀಡಿದ ಬಿಜೆಪಿ MP

Pinterest LinkedIn Tumblr


ಹೊಸದಿಲ್ಲಿ: ತಾಜ್‌ಮಹಲ್‌ ಶಿವನ ದೇವಸ್ಥಾನ ಆಗಿತ್ತು, ಮೊಘಲರಿಂದ ನಾಶಗೊಂಡಿತು ಎಂಬುದಾಗಿ ಬಿಜೆಪಿ ಸಂಸದ ವಿನಯ್‌ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ಮುಜುಗರ ಎದುರಾಗಿದೆ.

ತಾಜ್‌ಮಹಲ್‌ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ನೀಡಿರುವ ವಿವಾದಾತ್ಮಕ ಹೇಳಿಕೆಯಿಂದ ಮುಗುಗರಕ್ಕೆ ಒಳಗಾಗಿದ್ದ ಬಿಜೆಪಿ ಅದು ಕೇವಲ ಸೋಮ್‌ ಅವರ ವೈಯಕ್ತಿಕ ಹೇಳಿಕೆ ಎಂದಿತ್ತು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡುವಂತೆ ಸೋಮ್‌ಗೆ ಸೂಚಿಸಿದ್ದಾರೆ. ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾರತೀಯರು ಬೆವರು ಸುರಿಸಿದ್ದಾರೆ ಎನ್ನುವ ಮೂಲಕ ಯೋಗಿ ಆದಿತ್ಯನಾಥ್‌ ಅದರ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

1990ರಲ್ಲಿ ನಡೆದ ರಾಮ ಮಂದಿರ ಚಳವಳಿಯಲ್ಲಿ ಕಟಿಯಾರ್‌ ಮುಂಚೂಣಿಯಲ್ಲಿದ್ದರು. ಶೀವಲಿಂಗ ಪೂಜಿಸುತ್ತಿದ್ದ ನಿರ್ದಿಷ್ಟ ಸ್ಥಳದಲ್ಲಿ ತಾಜ್‌ ಮಹಲ್‌ ನಿರ್ಮಿಸಲಾಗಿದೆ ಎಂದು ಹೇಳಿರುವ ಅವರು ಹಿಂದೂ ಪೂಜಾಸ್ಥಳಗಳನ್ನು ಮೊಘಲರು ನಾಶಪಡಿಸಿರುವುದಾಗಿ ಹೇಳಿದ್ದಾರೆ.

Comments are closed.