ಅಂತರಾಷ್ಟ್ರೀಯ

ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ ಭಾರತೀಯ ಮೂಲದ ಯುವಕ

Pinterest LinkedIn Tumblr

ಲಂಡನ್: ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ.

ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ ಅವರು ಒಂದು ವರ್ಷಗಳ ಹಿಂದೆ ತನ್ನ ಶಾಲಾ ಕೆಲಸದೊಂದಿಗೆ ಆನ್ ಲೈನ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಹಲವು ಮನೆ, ಆಸ್ತಿಗಳ ಮಾರಾಟದ ಡೀಲ್ ಕುದಿರಿಸುತ್ತಿದ್ದ.

ಅಕ್ಷಯ್ ಸ್ಥಾಪಿಸಿದ “doorsteps.co.uk” ಸಂಸ್ಥೆ ಈಗ 12 ಮಿಲಿಯನ್ ಪೌಂಡ್ ಬೆಲೆ ಬಾಳುತ್ತಿದ್ದು, ಈ ಮೂಲಕ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಅಲ್ಲದೆ ಅಕ್ಷಯ್ ಅವರ “doorsteps.co.uk” ಆರಂಭವಾಗಿ 16 ತಿಂಗಳಲ್ಲಿ ಬ್ರಿಟನ್ ನ 18ನೇ ಅತಿ ದೊಡ್ಡ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ.

ತಾನು ಇದುವರೆಗೆ 100 ಮಿಲಿನಿಯನ್ ಪೌಂಡ್ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿಸಿರುವುದಾಗಿ ಅಕ್ಷಯ್ ಹೇಳಿಕೊಂಡಿದ್ದಾರೆ. ತನ್ನ ಸಂಬಂಧಿಯೊಬ್ಬರಿಂದ ಕೇವಲ 7 ಸಾವಿರ ಪೌಂಡ್ ಸಾಲ ಪಡೆದು “doorsteps.co.uk” ಆರಂಭಿಸಿದ್ದ ಅಕ್ಷಯ್ ಈಗ 12 ಜನರಿಗೆ ಉದ್ಯೋಗ ನೀಡಿದ್ದಾರೆ.

Comments are closed.