ಅಂತರಾಷ್ಟ್ರೀಯ

ಭಾರಿ ಟ್ರಾಫಿಕ್ ಜಾಮ್ ಮಾಡಿದ ಸಿಂಹಗಳ ಗುಂಪು

Pinterest LinkedIn Tumblr

ಮಹಾನಗರಗಳಲ್ಲಿ ಟ್ರಾಫಿಕ್​ಜಾಮ್ ಉಂಟಾಗಿ ಜನರು ತೊಂದರೆ ಪಡುವುದು ಸಾಮಾನ್ಯ. ಅಪಘಾತ ಮತ್ತಿತರ ಘಟನೆಗಳು ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಂಚಾರ ದಟ್ಟಣೆ ಉಂಟಾಗುತ್ತವೆ. ಆದರೆ, ದಟ್ಟ ಕಾಡಿನ ರಸ್ತೆಯಲ್ಲಿ ಪ್ರಾಣಿಗಳೇ ಟ್ರಾಫಿಕ್ ಜಾಮ್ ಉಂಟು ಮಾಡಿದರೆ ಹೇಗಿರಬೇಡ?

ದಕ್ಷಿಣ ಆಫ್ರಿಕಾದ ಕ್ರುಗರ್ ಅಂತಾರಾಷ್ಟ್ರೀಯ ಅಭಯಾರಣ್ಯದಲ್ಲಿ ಇತ್ತೀಚೆಗೆ ಭಾರಿ ಸಂಚಾರದಟ್ಟಣೆ ಉಂಟಾಗಿತ್ತು. ಇದಕ್ಕೆ ಕಾರಣವಾಗಿದ್ದು ಬರೋಬ್ಬರಿ 18 ಸಿಂಹಗಳಿದ್ದ ಗುಂಪು!

ಮಧ್ಯಾಹ್ನದ ವೇಳೆಗೆ ಸಿಂಹಗಳ ಗುಂಪು ಕಾಡೆಮ್ಮೆಯೊಂದನ್ನು ಬೇಟೆಯಾಡಿತ್ತು. ರಸ್ತೆ ಮಧ್ಯೆ ಅದನ್ನು ಎಳೆತಂದು ಊಟ ಮಾಡತೊಡಗಿದವು. ಆ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳ ಸವಾರರಿಗೆ ಅಚ್ಚರಿ ಹಾಗೂ ಭಯ ಉಂಟಾಗಿತ್ತು. ಇಷ್ಟೊಂದು ಸಿಂಹಗಳನ್ನು ಒಟ್ಟಿಗೇ ನೋಡಿ ಅವರೂ ಖುಷಿ ಪಟ್ಟರು. ಸಿಂಹಗಳು ಕಾಡೆಮ್ಮೆಯನ್ನು ತಿಂದು ಅಲ್ಲಿಂದ ಹೊರಡುವವರೆಗೂ ಯಾವುದೇ ತೊಂದರೆ ಮಾಡದೇ ಶಾಂತಿಯುತವಾಗಿಯೇ ರಸ್ತೆಯಲ್ಲಿ ಕಾದಿದ್ದರು.

ಸಿಂಹಗಳ ಭೋಜನಕೂಟ ಸುಮಾರು ಒಂದು ತಾಸು ಸಾಗಿತ್ತು. ಆಹಾರ ಸೇವಿಸಿದ ಬಳಿಕ ಯಾವುದೇ ವಾಹನ ಸವಾರರಿಗೆ ಹಾನಿ ಮಾಡದೇ ಸಿಂಹಗಳು ಕಾಡಿನಲ್ಲಿ ಮರೆಯಾದವು. ಹಲವರು ಈ ದೃಶ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಸಾಮಾಜಿಕ ತಾಲತಾಣಗಳಲ್ಲಿ ಪ್ರಕಟಿಸಿದರು. ಇದಕ್ಕೆ ಭಾರಿ ಪ್ರತಿಕ್ರಿಯೆಯೂ ಬಂದಿದೆ. ಕ್ರುಗರ್ ಅಭಯಾರಣ್ಯಕ್ಕೆ ದಿನವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ, ಸಫಾರಿಗೆ ತೆರಳುತ್ತಾರೆ. ಆದರೆ, ಇಷ್ಟೊಂದು ಸಿಂಹಗಳನ್ನು ಒಂದೇ ಬಾರಿಗೆ ನೋಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.