ಅಂತರಾಷ್ಟ್ರೀಯ

ಸಂಸತ್ತಿನಲ್ಲಿ ಸಂಸದೆಗೆ ಲೈಂಗಿಕ ದೌರ್ಜನ್ಯ

Pinterest LinkedIn Tumblr


ಕರಾಚಿ: ಪಾಕಿಸ್ತಾನದ ಸಂಸದೆಯೋರ್ವರು ಸಂಸತ್ತಿನಲ್ಲಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತಿರುವ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಪ್ರಹಸನ ಶನಿವಾರ ನಡೆದಿದೆ.

ಸಿಂಧ್ ಪ್ರದೇಶದ ಸಂಸದೆ ನಸ್ರತ್ ಸಹರ್ ಅಬ್ಬಾಸಿ, ಈ ಆರೋಪವನ್ನು ಮಾಡಿದ್ದು ಸಚಿವ ಇಮ್ದಾದ್ ಪಿಠಾಫಿ ಎನ್ನುವವರು ತನ್ನ ಖಾಸಗಿ ಚೇಂಬರ್‌ಗೆ ಬರುವಂತೆ ನನ್ನನ್ನು ಕರೆದಿದ್ದರು. ಇದು ನಮ್ಮಲ್ಲಿ ಮಹಿಳಾ ರಕ್ಷಣಾ ಕಾನೂನುಗಳಿಗೆ ಬೆಲೆಯೇ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಸಂಸದರಾದ ನಮಗೇ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಪ್ರಜೆಗಳ ಗತಿ ಏನು? ಸಂಸದನ ವರ್ತನೆಯನ್ನು ನಾನು ಬಲವಾಗಿ ಪ್ರತಿಭಟಿಸಿದೆ. ಆದರೆ ಸ್ವತಃ ಮಹಿಳೆಯಾಗಿರುವ ಸಭಾಪತಿ ಯಾವುದೇ ಕ್ರಮವನ್ನು ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಹತಾಶ ಅಬ್ಬಾಸಿ ಶನಿವಾರ ಪೆಟ್ರೋಲ್ ಬಾಟಲ್ ಎತ್ತಿಕೊಂಡು ಬಂದು, ಪಿಠಾಫಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.

ಈ ಪ್ರಸಂಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದಂತೆ ಪಿಠಾಫಿ ಕ್ಷಮೆಯಾಚಿಸಿದ್ದಾರೆ.

Comments are closed.