
ಸ್ಟಾಕ್‍ಹೋಮ್: ಮೂವರು ಕಾಮುಕರು ಸೇರಿ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿ ಅದನ್ನು ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ ಹೀನ ಘಟನೆಯೊಂದು ಸ್ವೀಡನ್‍ನಲ್ಲಿ ನಡೆದಿದೆ.
ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್‍ನಿಂದ 70 ಕಿಮಿ ದೂರದಲ್ಲಿರುವ ಉಪ್ಸಾಲಾ ಅಪಾರ್ಟ್‍ಮೆಂಟ್‍ನಲ್ಲಿ 18, 20 ಹಾಗೂ 24 ವರ್ಷ ವಯಸ್ಸಿನ ಮೂವರು ಆರೋಪಿಗಳನ್ನು ಭಾನುವಾರದಂದು ಪೊಲೀಸರು ಬಂಧಿಸಿದ್ದಾರೆ.
ಕಾಮುಕಾರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅದನ್ನು 60,000 ಸದಸ್ಯರಿರುವ ಫೇಸ್‍ಬುಕ್ ಗ್ರೂಪ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದರು. ಇದನ್ನು ನೋಡಿದ ಗ್ರೂಪಿನ ಸದಸ್ಯರಲ್ಲಿ ಒಬ್ಬರಾದ ಜೋಸ್‍ಫೈನ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಘಟನೆಯ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಜೋಸ್‍ಫೈನ್, ಪೊಲೀಸರು ಹೇಳಿರುವಂತೆ ಆರೋಪಿಗಳಲ್ಲಿ ಒಬ್ಬನಾದ 24 ವರ್ಷದ ಯುವಕ ಈ ಹಿಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಆತ ಅತ್ಯಾಚಾರಕ್ಕೂ ಮುನ್ನ ಯುವತಿಯ ಬಟ್ಟೆ ಹರಿದ. ಅಲ್ಲದೆ ಅತ್ಯಾಚಾರವನ್ನು ವಿಡಿಯೋ ಮಾಡಿದ್ದು, ಫೋಟೋಗಳನ್ನು ಕೂಡ ಕ್ಲಿಕ್ಕಿಸಿ ಸ್ನ್ಯಾಪ್‍ಚಾಟ್‍ನಲ್ಲಿ ಹಂಚಿಕೊಂಡಿದ್ದಾನೆ ಅಂತ ಹೇಳಿದ್ದಾರೆ.
ಸೋಮವಾರದಂದು ತನಿಖಾಧಿಕಾರಿಗಳು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದು, ಯುವತಿ ಮೇಲೆ ನಡೆದ ದಾಳಿಯ ಫೋಟೋಗಳಿದ್ದರೆ ಅದನ್ನು ಪೊಲೀಸರಿಗೆ ನೀಡುವಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕೇಳಿದ್ದಾರೆ.
ಸದ್ಯಕ್ಕೆ ವೀಡಿಯೋವನ್ನು ಫೇಸ್‍ಬುಕ್‍ನಿಂದ ತೆಗೆದುಹಾಕಲಾಗಿದೆ. ಆದ್ರೆ ಅದರ ಆಯ್ದ ಭಾಗಗಳನ್ನು ಸ್ವೀಡಿಶ್ ಮಾಧ್ಯಮಗಳು ಪ್ರಸಾರ ಮಾಡಿದ್ದು, ಒಬ್ಬ ಆರೋಪಿ ರಿವಾಲ್ವರ್ ಹಿಡಿದಿದ್ದನೆಂದು ವರದಿಯಾಗಿದೆ.
Comments are closed.