ಮೂಡಿಗೆರೆ: ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತು ಸವಿತಾ ಅವರ ದಾಂಪತ್ಯ ಜೀವನದಲ್ಲಿ ಮತ್ತೆ ಬಿರುಕು ಕಾಣಿಸಿದೆ. ಜೀವನಾಂಶ, ಆಸ್ತಿ, ಕೋರ್ಟ್ ವೆಚ್ಚ ಕೋರಿ ಸವಿತಾ ಮೈಸೂರು ಜೆಎಂಎಫ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮೂಲಕ ಮಾಜಿ ಶಾಸಕರ ದಾಂಪತ್ಯ ಕಲಹ ವಿಚ್ಛೇದನ ಹಂತ ತಲುಪಿದಂತಾಗಿದೆ.
.1.50 ಲಕ್ಷ ತಿಂಗಳ ಜೀವನಾಂಶ ದಾವೆ, .5 ಲಕ್ಷ ಕೋರ್ಟ್ ವೆಚ್ಚ ನೀಡುವಂತೆ ವಕೀಲರ ಮೂಲಕ ದಾವೆ ಹೂಡಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಅವರಿಗೆ ಜ.18ರಂದು ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಎಂ.ಪಿ. ಕುಮಾರಸ್ವಾಮಿ ಮತ್ತು ಸವಿತಾ ದಾಂಪತ್ಯ ಜೀವನದಲ್ಲಿ ಅನೇಕ ಬಾರಿ ಜಗಳ ಉಂಟಾಗಿದೆ.ಇತ್ತೀಚೆಗಷ್ಟೆಮೂಡಿಗೆರೆಯ ಕೆಲ ಹಿರಿಯ ಮುಖಂಡರ ಸಮ್ಮುಖದಲ್ಲಿ ರಾಜಿಯಾಗಿದ್ದರು. ಬಳಿಕ ಸತಿಪತಿಗಳು ಧರ್ಮಸ್ಥಳಕ್ಕೆ ತೆರಳಿ ಒಂದಾಗಿದ್ದೇವೆ ಎಂದು ತೋರ್ಪಡಿಸಿದ್ದರು. ಅಲ್ಲದೆ, ಹಳ್ಳಿಯಲ್ಲಿ ನೆಲೆಸಲು ಪತ್ನಿ ಒಪ್ಪದಿದ್ದ ಕಾರಣ ಪಟ್ಟಣದ ಬಿಳಗುಳದಲ್ಲಿ ಸುಸಜ್ಜಿತ ಬಾಡಿಗೆ ಮನೆ ಮಾಡಿ ಸಂಸಾರ ಹೂಡಿದ್ದರು. ಕೆಲ ದಿನಗಳ ಹಿಂದೆ ಸವಿತಾ ಅವರು ಕುಮಾರಸ್ವಾಮಿ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ ಎಂಬ ಕಾರಣಕ್ಕೆ ಮತ್ತೆ ಜಗಳವಾಗಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ.
Comments are closed.