ಅಂತರಾಷ್ಟ್ರೀಯ

ಚೀನಾದಲ್ಲಿ 73.1 ಕೋಟಿ ಅಂತರ್ಜಾಲ ಬಳಕೆದಾರರು

Pinterest LinkedIn Tumblr


ಬೀಜಿಂಗ್: ಚೀನಾದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 73.1 ಕೋಟಿಗೆ ಏರಿಕೆಯಾಗಿದೆ. ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇ.53.2ರಷ್ಟು ಅಂತರ್ಜಾಲ ಬಳಸುವವರಿದ್ದು, ಇ–ಕಾಮರ್ಸ್‌ ಕ್ಷೇತ್ರವೂ ವಿಸ್ತರಿಸಿದೆ.

ಚೀನಾ ಅಂತರ್ಜಾಲ ಸಂಪರ್ಕ ಮಾಹಿತಿ ಕೇಂದ್ರ(ಸಿಐಎನ್‌ಐಸಿ)ದ ಪ್ರಕಾರ, ದೇಶದ 69.5 ಕೋಟಿ ಜನ ಮೊಬೈಲ್‌ ಮೂಲಕ ಅಂತರ್ಜಾಲ ಸಂಪರ್ಕ ಸಾಧಿಸುತ್ತಿದ್ದಾರೆ.

ಜಗತ್ತಿನ ಅಂತರ್ಜಾಲ ಬಳಕೆದಾರರಲ್ಲಿ ಈಗಾಗಲೇ ಚೀನಾ ಮೊದಲ ಸ್ಥಾನದಲ್ಲಿದ್ದು, ಫೋನ್‌ ಬಳಸಿ ಅಂತರ್ಜಾಲದಲ್ಲಿ ಮಾಹಿತಿ ಹುಡುಕಾಟ ನಡೆಸುವುದು ವಾರ್ಷಿಕ ಶೇ.10ರಷ್ಟು ಏರಿಕೆ ಕಂಡಿದೆ.

ಇನ್ನೂ ಮೊಬೈಲ್‌ನಿಂದ 46.9 ಕೋಟಿ ಜನ ಹಣ ಪಾವತಿ ಮಾಡುತ್ತಿದ್ದಾರೆ. 2015ರಿಂದ ಇ–ಪಾವತಿ ವ್ಯವಸ್ಥೆಯಲ್ಲಿ ಶೇ.31.2ರಷ್ಟು ಹೆಚ್ಚಳವಾಗಿದೆ.

ಸರ್ಕಾರದ ಬಹುತೇಕ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ ಹಾಗೂ ಮೊಬೈಲ್‌ನಲ್ಲೇ ಅಗತ್ಯ ಮಾಹಿತಿ ದೊರೆಯುವ ವ್ಯವಸ್ಥೆ ಇರುವುದರಿಂದ ಜೀವನ ಮಟ್ಟ ಉತ್ತಮಗೊಳ್ಳಲು ಕಾರಣವಾಗಿದೆ.

ಚೀನಾದಲ್ಲಿ ಪ್ರಸ್ತುತ 91 ಅಂತರ್ಜಾಲ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ₹53.58 ಲಕ್ಷ ಕೋಟಿ(786.1 ಬಿಲಿಯನ್‌ ಡಾಲರ್‌) ವಹಿವಾಟು ನಡೆಯುತ್ತಿದೆ. ಇದರಲ್ಲಿ ಟೆನ್ಸೆಂಟ್‌ ಮತ್ತು ಅಲೀಬಾಬಾ ಸಂಸ್ಥೆಗಳು ಶೇ.57ರಷ್ಟು ಪಾಲು ಹೊಂದಿವೆ.

Comments are closed.