ಅಂತರಾಷ್ಟ್ರೀಯ

ಅಫ್ಘಾನಿಸ್ತಾನ ನೀತಿಯನ್ನು ಮರುಪರಿಶೀಲಿಸಿ: ಟ್ರಂಪ್ ಗೆ ತಾಲೀಬಾನ್

Pinterest LinkedIn Tumblr


ಕಾಬುಲ್: ಅಫ್ಘಾನಿಸ್ತಾನದಲ್ಲಿ ತನ್ನ ಸೇನಾ ಪಡೆಗಳನ್ನು ನಿಯೋಜಿಸಿರುವ ಅಮೆರಿಕ ಅಫ್ಘಾನಿಸ್ತಾನದ ನೀತಿಯನ್ನು ಮರುಪರಿಶೀಲಿಸಬೇಕೆಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನು ಉಗ್ರ ಸಂಘಟನೆ ತಾಲೀಬಾನ್ ಕೇಳಿದೆ.
ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಹೇಳಿಕೆ ಬಿಡುಗಡೆ ಮಾಡಿರುವ ಉಗ್ರ ಸಂಘಟನೆ ತಾಲೀಬಾನ್, ಅಮೆರಿಕಾದ ಹೊಸ ಸರ್ಕಾರವೂ ತನ್ನ ಹಿಂದಿನ ಸರ್ಕಾರಗಳ ನೀತಿಯನ್ನೇ ಅನುಸರಿಸುವುದಾದರೆ ತಾಲೀಬಾಮ್ ಉಗ್ರ ಸಂಘಟನೆ ಅಫ್ಘಾನಿಸ್ತಾನಾದಲ್ಲಿ ಹಿಂಸಾಚಾರವನ್ನು ಮುಂದುವರೆಸಲಿದೆ ಎಂದು ಎಚ್ಚರಿಕೆ ನೀಡಿದೆ.
ಅಮೆರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳ ಪಡೆಗಳ ಆಕ್ರಮಣದ ಫಲವಾಗಿ ಹಿಂಸಾಚಾರ ನದೆಯುತ್ತಿದ್ದು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಾಲೀಬಾನ್ ಹೇಳಿದೆ. ಆದರೆ ಅಫ್ಘಾನಿಸ್ತಾನದ ಮುಖ್ಯ ಕಾರ್ಯದರ್ಶಿ ಅಬ್ದುಲ್ಲಾ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಟ್ರಂಪ್ ಅವರ ಬದ್ಧತೆ, ಭರವಸೆಗಳನ್ನು ಸ್ವಾಗತಿಸಿದ್ದಾರೆ.

Comments are closed.