ಅಂತರಾಷ್ಟ್ರೀಯ

ರೋಬೋದಿಂದ ಮೊದಲ ಲೇಖನ ಪ್ರಕಟ

Pinterest LinkedIn Tumblr


ಬೀಜಿಂಗ್‌: ಒಂದೇ ಸೆಕೆಂಡ್‌ನಲ್ಲಿ ಪಟಪಟನೆ 300 ಪದಗಳನ್ನು ಟೈಪಿಸಿ ಸುದ್ದಿ ಸಿದ್ಧಪಡಿಸಿ ಕೊಟ್ಟ ರೋಬೋ ಪತ್ರಕರ್ತನ ಲೇಖನ ಚೀನಾ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ಚೀನಾದ ‘ಸ್ಪ್ರಿಂಗ್‌ ಫೆಸ್ಟಿವಲ್‌ ಟ್ರಾವೆಲ್‌ ಸೀಸನ್‌’ ಕುರಿತಾದ ಲೇಖನವನ್ನು ಕ್ಸಿಯೋ ನನ್‌ ಹೆಸರಿನ ರೋಬೋ ರಿಪೋರ್ಟರ್‌ ಸಿದ್ಧಪಡಿಸಿದೆ ಎಂದು ಪೀಕಿಂಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ವ್ಯಾನ್‌ ಕ್ಸಿಯೋಜನ್‌ ತಿಳಿಸಿದರು.

ಯಾವುದೇ ರಿಪೋರ್ಟರ್‌ಗಿಂತಲೂ ಹೆಚ್ಚು ವೇಗವಾಗಿ ಸುದ್ದಿ ಬರೆಯುವ ಹಾಗೂ ವಿಷಯ ಮಾಹಿತಿ ವಿಶ್ಲೇಷಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಸದ್ಯ ನೇರ ಸಂದರ್ಶನ ನಡೆಸುವ ಸಾಮರ್ಥ್ಯವನ್ನು ಈ ರೋಬೋ ಹೊಂದಿಲ್ಲ. ಆದರೆ, ಮಾಧ್ಯಮಗಳ ಬಹಳಷ್ಟು ಕೆಲಸಗಳಲ್ಲಿ ಸಹಕಾರಿಯಾಗ ಬಲ್ಲದು ಎಂದರು.

Comments are closed.