ಅಂತರಾಷ್ಟ್ರೀಯ

ತನ್ನ ಪರ್ಮನೆಂಟ್ ವೇಶ್ಯೆ ಬೇರೊಬ್ಬನೊಂದಿಗೆ ಮಲಗಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿ ಮಾಡಿದ್ದೇನು ಗೊತ್ತಾ..?

Pinterest LinkedIn Tumblr

se

ಸಾವ್ ಪಾಲೋ(ಬ್ರೆಜಿಲ್): ತನ್ನ ಪರ್ಮನೆಂಟ್ ವೇಶ್ಯೆ ಬೇರೊಬ್ಬನೊಂದಿಗೆ ಮಲಗಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊರ್ವ ವೇಶ್ಯೆಗೃಹದಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ.

ಬ್ರೆಜಿಲ್ ನ ಸಾವ್ ಪಾಲೋದ ಜಬೋಟಿಕಾಬಲ್ ನಗರದಲ್ಲಿ ಕಳೆದ ಬುಧವಾರ ರಾತ್ರಿ ಖಾಯಂ ವ್ಯಕ್ತಿಯೊರ್ವ ವೇಶ್ಯಾಗೃಹಕ್ಕೆ ತೆರಳಿದ್ದಾನೆ. ಅಲ್ಲಿನ ತಾನು ಪ್ರತಿ ಬಾರಿ ಮಲಗುತ್ತಿದ್ದ ವೇಶ್ಯೆಯ ಕುರಿತು ವಿಚಾರಿಸಿದ್ದಾನೆ. ಆಗ ಆಕೆ ಬೇರೊಬ್ಬರೊಂದಿಗೆ ಮಲಗಿದ್ದಾಳೆ ಎಂಬ ವಿಷಯ ತಿಳಿದ ಆತ ಕಾರಿನಲ್ಲಿದ್ದ ರಿವಾಲ್ವರ್ ಅನ್ನು ತಂದು ಫೈರಿಂಗ್ ಮಾಡಿದ್ದಾನೆ. ಪರಿಣಾಮ ವೇಶ್ಯೆ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.

ವೇಶ್ಯಾಗೃಹದಲ್ಲಿ ಫೈರಿಂಗ್ ಶಬ್ಧ ಕೇಳಿದ ಇನ್ನಿತರ ವೇಶ್ಯೆಯರು ಮತ್ತು ಗ್ರಾಹಕರು ಹೊರಗೆ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಫೈರಿಂಗ್ ಬಳಿಕ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದು ಮರು ದಿನ ಪೊಲೀಸರಿಗೆ ಶರಣಾಗಿದ್ದಾನೆ.

Comments are closed.