ಅಂತರಾಷ್ಟ್ರೀಯ

37 ವರ್ಷಗಳ ನಂತರ ಸಹರಾ ಮರುಭೂಮಿಯಲ್ಲಿ ಹಿಮಮಳೆ

Pinterest LinkedIn Tumblr

sahara
ಅಲ್ಜೇರ್ಸ್‌: ಸಹರಾ ಮರುಭೂಮಿಯಲ್ಲಿ 37 ವರ್ಷಗಳ ಬಳಿಕ ಹಿಮಮಳೆಯಾಗಿದೆ. ಉತ್ತರ ಆಫ್ರಿಕಾದ ಅಲ್ಜೇರಿಯಾದ ಸಹರಾ ಮರುಭೂಮಿಯಲ್ಲಿ ಹಿಮಮಳೆಯಾಗಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಹರಾದ ಯೇನ್‌ಸೆಫ್ರಾದಲ್ಲಿ 1979ರಲ್ಲಿ ಹಿಮಮಳೆಯಾಗಿತ್ತು. ಆ ಬಳಿಕ ಇತ್ತೀಚೆಗೆ ಅಲ್ಜೇರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಮಳೆಯಾಗಿದೆ.

ಮರಳ ಮೇಲೆ ಹಿಮ ಸುರಿದಿರುವ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಕರೀಮ್‌ ಬೋಚೆಟಟ (Karim Bouchetata) ಎಂಬುವರು ಕ್ಲಿಕ್ಕಿಸಿರುವ ಈ ಚಿತ್ರಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಮರುಭೂಮಿಯ ಮಂಜಿನ ಮಳೆಗೆ ಸ್ಥಳೀಯರು ಪುಳಕಗೊಂಡಿದ್ದಾರೆ. 2005 ಮತ್ತು 2012ರಲ್ಲಿ ಸಹರಾದ ಕೆಲ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಿಮಮಳೆಯಾಗಿತ್ತು.

Comments are closed.