ಅಂತರಾಷ್ಟ್ರೀಯ

ನ್ಯೂಯಾರ್ಕ್‌’ನಲ್ಲಿ ಪತ್ನಿಯನ್ನು ಇರಿದು ಕೊಂದ ಭಾರತೀಯ ಮೂಲದ ವ್ಯಕ್ತಿ ಪತಿ

Pinterest LinkedIn Tumblr

kneif'

ನ್ಯೂಯಾರ್ಕ್‌: 46ರ ಹರೆಯದ ತನ್ನ ಪತ್ನಿ ರಾಜವಂತಿ ಬಲದೇವ್‌ ಅವರನ್ನು ನಡುರಾತ್ರಿ ಕ್ವೀನ್ಸ್‌ ರಸ್ತೆಯಲ್ಲಿ ಹಲವು ಬಾರಿ ಇರಿದು ಕೊಂದ 50ರ ಹರೆಯದ ಭಾರತೀಯ ಮೂಲದ ಪ್ರೇಮ್‌ ರಾಮಪ್ರಸಾದ್‌ ಎಂಬಾತನ ವಿರುದ್ಧ ಕೊಲೆ ಕೃತ್ಯದ ದೋಷಾರೋಪವನ್ನು ಹೊರಿಸಲಾಗಿದೆ.

ಹೊಟೇಲ್‌ನಲ್ಲಿ ಉದ್ಯೋಗಿಯಾಗಿರುವ ರಾಜವಂತಿ ಬಲದೇವ್‌ ಅವರು ಡಿ.5ರಂದು ಮಧ್ಯರಾತ್ರಿ ತನ್ನ ಕರ್ತವ್ಯ ಮುಗಿಸಿ ಹೊರಬಂದಾಗ ಪತಿ ಪ್ರೇಮ್‌ ರಾಮ್‌ಪ್ರಸಾದ್‌ ಅವರು ಪತ್ನಿಯೊಂದಿಗೆ ಮಾತಿನ ಜಗಳ ಆರಂಭಿಸಿ ಇದರ ಪರಾಕಾಷ್ಠೆಯಲ್ಲಿ ಅವರು ಪತ್ನಿಗೆ ಹಲವು ಬಾರಿ ಇರಿದರು.

ಗಂಭೀರವಾಗಿ ಗಾಯಗೊಂಡ ಬಲದೇವ್‌ ಅವರನ್ನು ಸ್ಥಳೀಯ ಕ್ವೀನ್ಸ್‌ ಆಸ್ಪತ್ರೆಗೆ ಒಡನೆಯೇ ಒಯ್ಯಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಗಯಾನಾದಲ್ಲಿ ವಾಸಿಸಿಕೊಂಡಿರುವ ರಾಮ್‌ಪ್ರಸಾದ್‌ ಅವರು ಘಟನೆ ನಡೆದ ಸಂದರ್ಭದಲ್ಲಿ ಕ್ವೀನ್ಸ್‌ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ತನ್ನ ಗೆಳೆಯನ ಮನೆಯಲ್ಲಿ ತಂಗಿದ್ದರು.

ಕೊಲೆ ಕೃತ್ಯ ಸಾಬೀತಾದಲ್ಲಿ ರಾಮ್‌ಪ್ರಸಾದ್‌ಗೆ ಕನಿಷ್ಠ 25 ವರ್ಷ ಜೈಲು ಶಿಕ್ಷೆಯಾಗುವ ಸಂಭವವಿದೆ ಎಂದು ಕ್ವೀನ್ಸ್‌ ಜಿಲ್ಲಾ ಅಟಾರ್ನಿ ರಿಚರ್ಡ್‌ ಬ್ರೌನ್‌ ಹೇಳಿದ್ದಾರೆ.

Comments are closed.